ಸುನಿಲ್‌ಗೆ ಆಕ್ಷನ್‌ಗಿಂತಲೂ ಕಾಮಿಡಿಯೇ ಅಚ್ಚುಮೆಚ್ಚು
ನವದೆಹಲಿ, ಸೋಮವಾರ, 24 ಮಾರ್ಚ್ 2008( 14:44 IST )
ಮೈ ಜುಂ ಎನಿಸುವ ಫೈಟ್‌ಗಳಿಂದ ಆಕ್ಷನ್ ಸಿನಿಮಾಗಳಿಗೆ ಹೊಸ ಭಾಷ್ಯವನ್ನೇ ಬರೆದದ್ದು ಸುನಿಲ್ ಶೆಟ್ಟಿ. ಮೊಹ್ರಾ, ಶಸ್ತ್ರ ಮತ್ತು ಬಲವಾನ್ ಚಿತ್ರಗಳಲ್ಲಿ ಈ ರೀತಿಯ ಸನ್ನಿವೇಶಗಳು ಪ್ರೇಕ್ಷಕನನ್ನು ರೋಮಾಂಚನಗೊಳಿಸಿದ್ದವು. ಆದರೆ ಆ ಕುರಿತು ಸುನಿಲ್ ಶೆಟ್ಟಿ ಹೇಳುವ ಮಾತೇ ಬೇರೆ. ಆತ ತನಗೆ ಕಾಮಿಡಿ ಚಿತ್ರಗಳು ಹೆಚ್ಚು ಆಸಕ್ತಿದಾಯಕವಾಗಿವೆ ಎಂದಿದ್ದಾನೆ.
ನನಗೆ ಆಕ್ಷನ್‌ಗಿಂತಲೂ ಕಾಮಿಡಿಯೇ ಹೆಚ್ಚು ಇಷ್ಟ. ನಿಜಕ್ಕೂ ಹಾಸ್ಯದ ಸನ್ನಿವೇಶಗಳನ್ನು ನಿಭಾಯಿಸುವುದು ಕಷ್ಟದ ಕೆಲಸವೇ. ಇನ್ನೊಬ್ಬರನ್ನು ನಗಿಸಬಲ್ಲಂತಹ ಹಾಸ್ಯ ಪ್ರಜ್ಞೆ ಪ್ರದರ್ಶಿಸುವುದು ಸವಾಲೇ ಆಗಿದೆ. ನನಗೆ ಆತ್ಮತೃಪ್ತಿಯನ್ನು ನೀಡಬಲ್ಲಂತಹ ಕಾಮಿಡಿ ಚಿತ್ರಗಳನ್ನು ಹೆಚ್ಚು ಹೆಚ್ಚು ಮಾಡುತ್ತೇನೆ. ಆಕ್ಷನ್ ಕೂಡ ನನಗೆ ಇಷ್ಟವಾಗುವ ವಿಷಯವೇ. ಆದರೆ ಕಾಮಿಡಿ ನನಗೆ ಹೆಚ್ಚು ಆಸಕ್ತಿದಾಯಕವಾದುದಾಗಿದೆ ಎಂದು ತಿಳಿಸಿದ್ದಾರೆ.
ಆಕ್ಷನ್ ಸಿನಿಮಾಗಳಿಂದ ತಮ್ಮ ಬಾಲಿವುಡ್ ಇನಿಂಗ್ಸ್ ಆರಂಭಿಸಿದ ಶೆಟ್ಟಿ, ಆ ನಂತರ ಕಾಮಿಡಿ ರೋಲ್‌ಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೇರಾಫೇರಿ, ಆವಾರಾ ಪಾಗಲ್ ದಿವಾನಾ, ಅಪ್ನಾ ಸಪ್ನಾ ಮನಿ ಮನಿ ಮತ್ತು ಈಗ ಬಿಡುಗಡೆಗೊಳ್ಳಬೇಕಾಗಿರುವ ಒನ್ ಟೂ ತ್ರೀ ಮತ್ತು ಗೋಪಿ-ಕಿಷನ್ ಅವರ ಹಾಸ್ಯ ಪ್ರಧಾನ ಚಿತ್ರಗಳಾಗಿವೆ. ತಮ್ಮ 'ಪಾಪ್ ಕಾರ್ನ್ ಪಿಕ್ಚರ್ಸ್' ಕಂಪನಿಯಡಿಯಲ್ಲಿ ಚಿತ್ರಗಳ ನಿರ್ಮಾಣಕ್ಕೂ ತೊಡಗಿಸಿಕೊಂಡಿದ್ದಾರೆ.
ನನ್ನ ಕಂಪನಿಯ ನಿರ್ಮಾಣದ ಬಗ್ಗೆ ಮಾತ್ರ ನಾನು ತಲೆಕೆಡಿಸಿಕೊಳ್ಳುತ್ತೇನೆ. ಈಗ 17 ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಜೂನ್‌ನಿಂದ ಸೆಪ್ಟೆಂಬರ್ ನಡುವೆ 4 ಚಿತ್ರಗಳು ತೆರೆ ಕಾಣಲಿವೆ ಎಂದರು. ಶೆಟ್ಟಿ ಕಂಪನಿಯ ಈ ಮೊದಲ ನಿರ್ಮಾಣದ ಚಿತ್ರಗಳೆಂದರೆ, ಖೇಲ್ (2003), ರಕ್ತ್ (2006) ಮತ್ತು ಭಾಗಮ್ ಭಾಗ್(2007)
ಬಾಲಾಜಿ ಸಹಯೋಗದೊಂದಿಗೆ 7 ಚಿತ್ರಗಳ ನಿರ್ಮಾಣಕ್ಕೆ ಸಹಿ ಹಾಕಲಾಗಿದ್ದು, ಸ್ಟುಡಿಯೋ18 ಜೊತೆ ಒಂದು ಚಿತ್ರ ನಿರ್ಮಾಣಕ್ಕೆ ಸಹಿ ಮಾಡಲಾಗಿದೆ.