ಬಾಲಿವುಡ್‌ಗೆ ಮತ್ತೊಬ್ಬ ತಾರಾ ಪುತ್ರ
ಶಿಮ್ಲಾ, ಮಂಗಳವಾರ, 25 ಮಾರ್ಚ್ 2008( 11:04 IST )
ಮತ್ತೊಬ್ಬ ಸೂಪರ್ ಸ್ಟಾರ್ ಮಗ ಸಿನಿಮಾ ರಂಗವನ್ನು ಪ್ರವೇಶಿಸುತ್ತಿದ್ದಾನೆ. ತನ್ನ ತಂದೆಯರ ಹೆಜ್ಜೆಯ ಗುರುತಿನಲ್ಲಿ ಕಾಲಿಟ್ಟು ಪ್ರವೇಶಿಸಿದ ಅಭಿಷೇಕ್, ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ರೀತಿಯೇ ಈತನೂ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾನೆ.
ಮಾಜಿ ಬಿಜೆಪಿ ಸಂಸದ ಹಾಗೂ ಚಿತ್ರನಟ ಶತ್ರುಘ್ನ ಸಿನ್ಹಾರ ಪುತ್ರ, ಲವ್ ಸಿನ್ಹಾ, ತನ್ನ ಎಂಟ್ರಿಯನ್ನು, 'ಸದಿಯಾಂ' ಮೂಲಕ ಆರಂಭಿಸುತ್ತಿದ್ದಾನೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯದ ಕತೆ ಇದಾಗಿರುತ್ತದೆ.
ನನ್ನ ಜೊತೆಯ ತಾರೆಯರಂತೆಯೇ ನಾನೂ ಸಹ, ನನ್ನ ಮಗ ಉತ್ತಮ ನಟನಾಗಬೇಕು ಮತ್ತು ಯಶಸ್ವಿಯಾಗಬೇಕೆಂದು ಆಶಿಸುತ್ತೇನೆ ಎಂದು ಶತ್ರುಘ್ನ ಸಿನ್ಹಾ ತಿಳಿಸಿದರು.
ಚಂಡೀಗಢದ ಬಳಿ ಚಿತ್ರೀಕರಣ ನಡೆಸುತ್ತಿರುವ ಚಿತ್ರ ತಂಡದೊಂದಿಗೆ ಮಾತುಕತೆ ನಡೆಸಿದ ಶತ್ರುಘ್ನ ಸಿನ್ಹಾ, ಪಂಜಾಬ್ ಮತ್ತು ಜಮ್ಮುವಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. ಬಹುಶಃ ಸೆಪ್ಟೆಂಬರ್ ನಂತರ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ ಎಂದಿದ್ದಾರೆ.
ಹೇಮಾಮಾಲಿನಿ ಮತ್ತು ರೇಖಾ ಸುಮಾರು 20 ವರ್ಷಗಳ ನಂತರ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ನಟ ರಿಷಿ ಕಪೂರ್ ಲವ್‌ನ ತಂದೆಯಾಗಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಕಾಶ್ಮೀರಿ ಹುಡುಗಿ ಫರೀನ್ ಅಭಿನಯಿಸುತ್ತಿದ್ದಾಳೆ.
ಶಾರೂಖ್ ಖಾನ್ ಅಭಿನಯದ ದೀವಾನಾ ಚಿತ್ರದ ನಿರ್ದೇಶಕ ರಾಜ್ ಕನ್ವರ್ ಈ ಚಿತ್ರದ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಪ್ರಿಯ ಪಾಕಿಸ್ತಾನೀ ನಟ ಜಾವೇದ್ ಶೇಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.