ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಲಂಡನ್ ಕನಸಿಗೆ ಹೊಸಮುಖ ಬೇಕಾಗಿದೆ
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್ಡಿನ ಇಬ್ಬರು ಘಟಾನುಘಟಿ ನಾಯಕರ ಎದುರು ಹೊಸ ಮುಖವೊಂದನ್ನು ಕಣಕ್ಕಿಳಿಸಲು ವಿಪುಲ್ ಶಾ ನಿರ್ಧರಿಸಿದ್ದಾರಂತೆ. ಅವರ ಹೊಸ ಚಿತ್ರ 'ಲಂಡನ್ ಡ್ರೀಮ್ಸ್'ನಲ್ಲಿ ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ.

ಈ ಹಿಂದೆ ಕತ್ರಿನಾ ಕೈಫ್ ಲಂಡನ್ 'ಕನಸಿ'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಇತ್ತಾದರೂ ಮತ್ತೆ ಗುಸುಗುಸುಗಳು ಕರೀನಾ ಕಪೂರ್ ಸುತ್ತ ಸುತ್ತಿತ್ತು.

ಇದೀಗ ಈ ಎಲ್ಲ ಗುಸುಗುಸು ಪಿಸುಪಿಸುಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ವಿಪುಲ್ ಶಾ, ಅದು ಕತ್ರಿನಾಳೂ ಅಲ್ಲ, ಕರೀನಾಳೂ ಅಲ್ಲ, ಪ್ರಿಯಾಂಕಳೂ ಅಲ್ಲ. ಲಂಡನ್ ಡ್ರೀಮ್ಸ್‌ನಲ್ಲಿ ಹೊಸ ಮುಖ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಬಾಲಿವುಡ್ಡಿನ ಪರಿಣಿತರ ಎದುರು ಅದ್ಯಾಕೆ ಹೊಸ ಮುಖ ಎಂದು ಹುಬ್ಬು ಮೇಲೇರಿಸಿದರೆ, ವಿಪುಲ್ ಕೊಡುವ ಸಬೂಬು, ಅದು ಪಾತ್ರದ ಅವಶ್ಯಕತೆಯಂತೆ. ವೀಕ್ಷಕರು ಇದೀಗಾಗಲೇ ನೋಡಿರುವ ಮುಖಗಳನ್ನು ಈ ಪಾತ್ರಕ್ಕೆ ನೆಚ್ಚಿಕೊಳ್ಳುವಂತಿಲ್ಲ. ಇದಕ್ಕೆ ಹೊಸಮುಖ ಬೇಕಿದೆ ಮತ್ತು ಹೊಸಮುಖವೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ ಎಂದು ವಿಪುಲ್ ದೃಢವಾಗಿ ಹೇಳಿದ್ದಾರೆ.

ವಿಪುಲ್ ಯೋಜನೆಯ ಪ್ರಕಾರ ಚಿತ್ರವು ಜೂನ್ ಅಂತ್ಯದಲ್ಲಿ ಸೆಟ್ಟೇರಲಿದೆ.