ಕರ್ಜ್ ಕಾಮಿನಿಯಾಗಿ ಊರ್ಮಿಳಾ ಮಾತೋಂಡ್ಕರ್
ಸೆಕ್ಸೀನಟಿ ಊರ್ಮಿಳಾ ಮಾಂತೋಡ್ಕರ್ ಸವಾಲಿನ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಸುಭಾಶ್ ಘಾಯ್ ಅವರ ಕರ್ಜ್ ಚಿತ್ರದಲ್ಲಿ ಸಿಮಿ ಗರೆವಾಲ್ ನಟಿಸಿದ ಕಾಮಿನಿ ಪಾತ್ರವನ್ನು ಚಿತ್ರವೀಕ್ಷಕರು ಬಹುಷಃ ಮರೆತಿರಲಾರರು. ಈಗ ಅದೇ ಪಾತ್ರದಲ್ಲಿ ಮತ್ತೊಮ್ಮೆ ಊರ್ಮಿಳಾ ಮಾತೋಂಡ್ಕರ್ ನಟಿಸುತ್ತಿದ್ದಾರೆ. ಹಿಮೇಶ್ ರೇಷ್ಮಿಯಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸತೀಶ್ ಕೌಶಿಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕರ್ಜ್ಜ್ಜ್....(karzzzz) ಎಂದು ಹೆಸರಿಡಲಾಗಿದೆ.
ಇತ್ತೀಚೆಗೆ 40 ದಿನಗಳ ಕಾಲ, ಹಿಮೇಶ್ ಮತ್ತು ಊರ್ಮಿಳಾ ಅಭಿನಯದ ದೃಶ್ಯಗಳ ಚಿತ್ರೀಕರಣವನ್ನು ದಕ್ಷಿಣ ಆಫ್ರಿಕಾ ಮತ್ತು ಜೋಹಾನ್ಸ್ಬರ್ಗ್ನಲ್ಲಿ ಚಿತ್ರೀಕರಿಸಲಾಯಿತು. ಅತಿ ಶೀಘ್ರದಲ್ಲಿಯೇ ಐಟಂ ಸಾಂಗ್ ಒಂದನ್ನು ಚಿತ್ರೀಕರಿಸಲಾಗುವುದು. ಇದು ಮೂಲ ಚಿತ್ರದಲ್ಲಿ ಇಲ್ಲ. ಈ ಚಿತ್ರಕ್ಕಾಗಿಯೇ ಪ್ರತ್ಯೇಕವಾಗಿ ಚಿತ್ರೀಕರಿಸಲಾಗುವುದು. "ತಂದೂರಿ ನೈಟ್ಸ್" ಎಂಬ ಈ ಹಾಡನ್ನು ಐಟಂ ಸಾಂಗ್ಗಳ ರಾಣಿ ಎಂದೇ ಹೆಸರು ಪಡೆದಿರುವ ಗಾಯಕಿ ಸುನಿಧಿ ಚೌಹಾಣ್ ಹಾಡಲಿದ್ದಾರೆ.
ಊರ್ಮಿಳಾ ಹೊಸ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ನಿರ್ಮಾಪಕ ಭೂಷಣ್ ಕುಮಾರ್ ಮನಸ್ಸಿನಲ್ಲಿ ಈ ಪಾತ್ರ ಕುರಿತು ಒಂದು ಪರಿಕಲ್ಪನೆ ಇದ್ದು, ಅದನ್ನು ಮನಿಷ್ಗೆ ತಿಳಿಸಿದ್ದಾರೆ. ಅಂತೆಯೇ ಮನಿಷ್ ಮಲ್ಹೋತ್ರಾ ಊರ್ಮಿಳಾಗೆ ಈ ಚಿತ್ರಕ್ಕಾಹಿ ಹೊಸ ರೂಪ ನೀಡಲಿದ್ದಾರೆ.
ಹಿಮೇಶ್ರ ವಸ್ತ್ರ ವಿನ್ಯಾಸವನ್ನು ಅವರ ಸಹೋದರಿ ರೂಪ ನೋಡಿಕೊಳ್ಳಲಿದ್ದಾರೆ. ತಮ್ಮ ಜೊತೆ ನಟಿಸಿರುವ ಊರ್ಮಿಳಾ ಬಗ್ಗೆ ಮಾತನಾಡಿದ ಹಿಮೇಶ್, ಆಕೆ ನಿಜಕ್ಕೂ ವೃತ್ತಿಪರ ಕಲಾವಿದೆಯಾಗಿದ್ದಾರೆ. ಶೂಟಿಂಗಿನ ಸಮಯಕ್ಕೆ ಸರಿಯಾಗಿ ಶೂಟಿಂಗ್ ತಾಣದಲ್ಲಿ ಹಾಜರಿರುತ್ತಾರೆ. ಇದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ ಎಂದರು.