ತನ್ನ ಕಷ್ಟದ ದಿನಗಳಲ್ಲಿ ನೆರವಾದವರನ್ನು ರಜನಿಕಾಂತ್‌ರಂತಹ ಸೂಪರ್ ಸ್ಟಾರ್ ಕೂಡ ನೆನೆಯುತ್ತಾರೆ. ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾರೆ. ನಿಜ ಜೀವನದಲ್ಲಿಯೂ ಯಾವ ಹಮ್ಮುಬಿಮ್ಮು ಇಲ್ಲದೇ ಸೀದಾಸಾದ ಸಹಜವಾಗಿ ವರ್ತಿಸಿ ಜನರ ದೃಷ್ಟಿಯಲ್ಲಿ ನಿಜವಾಗಿಯೂ ಸೂಪರ್ ಸ್ಟಾರ್‌ಗಳೆನಿಸಿಕೊಳ್ಳುತ್ತಾರೆ.
ಆದರೆ ಕೆಲವರಿರುತ್ತಾರೆ. ಐಶ್ವರ್ಯ ರೈ ತರಹದವರು - ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವವರು. ನಟಿ ಐಶ್ವರ್ಯ, ತನ್ನ ಜೊತೆಗಾತಿ, ಕಷ್ಟದಲ್ಲಿ ನೆರವಾದವರನ್ನು ಮರೆತು ತನ್ನ 'ದೊಡ್ಡತನ'ವನ್ನು ಮೆರೆಸಿದ್ದಾಳೆ. ಈ ಅನುಭವವಾದದ್ದು ಶ್ವೇತಾ ಮೆನನ್ ಎಂಬ ಐಶ್‌ಳ ಹಳೆಯ ಗೆಳತಿಗೆ.
ಇದು ನಡೆದದ್ದು ಸಿಕಂದರ್ ಖೇರ್ ಅವರ ಚೊಚ್ಚಲ ಚಿತ್ರ 'ಸಮ್ಮರ್ 2007'ಗಾಗಿ ಹಮ್ಮಿಕೊಂಡಿದ್ದ ಔತಣಕೂಟದಲ್ಲಿ. ಪ್ರತ್ಯಕ್ಷ ದರ್ಶಿಯೊಬ್ಬರು ಹೇಳುವಂತೆ, ಆ ಔತಣಕೂಟದಲ್ಲಿ ಶ್ವೇತ ಹಾಜರಿದ್ದರು. ಅಂತೆಯೇ ಐಶ್ವರ್ಯ ಕೂಡ ಭಾಗವಹಿಸಿದ್ದರು. ಶ್ವೇತಾ ಈ ಸಂದರ್ಭದಲ್ಲಿ ಐಶ್ವರ್ಯಳನ್ನು ಕುರಿತು ಹಾಯ್ ಎಂದರು. ಆದರೆ ಐಶ್ವರ್ಯ ಕಾಟಾಚಾರಕ್ಕೆ ತಣ್ಣಗಿನ ಹಾಯ್ ಎಂದು ಅಲ್ಲಿಂದ ತೆರಳಿದರಂತೆ. ಐಶ್‌ಳ ಈ ವರ್ತನೆಯಿಂದಾಗಿ ಶ್ವೇತಾ ವಿಪರೀತವಾಗಿ ನೊಂದುಕೊಂಡರು.
ಶ್ವೇತಾ ಹಾಗೂ ಐಶ್ವರ್ಯ, 1990ರ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ, ಗೋವಾದಲ್ಲಿ ಒಂದೇ ಕೊಠಡಿಯನ್ನು ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ಸಾಕಷ್ಟು ಸಲಹೆ ಸೂಚನೆಗಳ ವಿನಿಮಯ ಮಾಡಿಕೊಂಡಿದ್ದರು. ಶ್ವೇತಾ ಈ ಬಗ್ಗೆ ಸಾಕಷ್ಟು ನೆರವನ್ನೂ ಸಹ ನೀಡಿದ್ದರು. ಐಶ್ವರ್ಯ ಈ ಸ್ಪರ್ಧೆಯಲ್ಲಿ ವಿಜೇತಳಾದ ಬಳಿಕವೂ ಶ್ವೇತಾರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಈಗ ಕಾಲ ಬದಲಾಗಿದೆ. ಶ್ವೇತಾ ಸಣ್ಣಪುಟ್ಟ ಅವಕಾಶಗಳಿಗಾಗಿ ತುಯ್ದಾಡುತ್ತಿದ್ದರೆ, ಐಶ್ವರ್ಯಾ ಯಶಸ್ಸಿನ ತುತ್ತತುದಿಗೇರಿದರವರು.