ಕ್ರೇಜಿ 4 ನಲ್ಲಿ ಹೃತಿಕ್ ಹಾಗೂ ಶಾರೂಖ್ ಇದ್ದಾರೆ. ಅದೂ ಬ್ರೇಕ್ ಫ್ರೀ ಎನ್ನುವ ಒಂದೇ ಹಾಡಿಗೆ ಇಬ್ಬರೂ ಕುಣಿದಿದ್ದಾರೆ. ಬಾಲಿವುಡ್ನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳಲ್ಲಿ ಇದು ಗಮನ ಸೆಳೆಯುವ ಲಕ್ಷಣವಿದೆ. ಇಬ್ಬರು ಖ್ಯಾತ ನಟರು ಒಂದೇ ಹಾಡಿಗೆ ಸ್ಪರ್ಧೆಯ ಮೇಲೆ ಕುಣಿದಿರುವುದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ.
ನಿರ್ದೇಶಕ ಜೈದೀಪ್ ಸೇನ್, ಚಿತ್ರದ ಬಗ್ಗೆ ಹೇಳುತ್ತಾ, "ಹೃತಿಕ್ ಹಾಡು (ಶಾರೂಖ್ ಖಾನ್ನಂತೆ ) ಒಂದೇ ಟ್ಯೂನ್ನಲ್ಲಿದ್ದು, ಹಾಡಿನಲ್ಲಿ ಅಲ್ಪ ಬದಲಾವಣೆ ಇರುತ್ತದೆ. ಆತ ಅದ್ಭುತವಾಗಿ ನರ್ತಿಸಿದ್ದಾರೆ. ಇದು ಚಿತ್ರದಲ್ಲಿ ಗೊತ್ತಾಗುತ್ತದೆ. ನಾನು ಅದೃಷ್ಟಶಾಲಿ ಎಂದೇ ಹೇಳಬೇಕು. ನನ್ನ ಮೊದಲ ಚಿತ್ರದಲ್ಲಿಯೇ ಇಬ್ಬರು ಮೆಗಾಸ್ಟಾರ್ಗಳು ಟೈಟಲ್ ಸಾಂಗ್ಗೆ ಕುಣಿದಿರುವುದು ನಿಜವಾದ ಅದೃಷ್ಟವೇ ಹೌದು" ಎಂದಿದ್ದಾರೆ.
ಈ ಚಿತ್ರದ ನೃತ್ಯ ಸಂಯೋಜನೆಯನ್ನು, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಮಾಡಿದ್ದಾರೆ. ಕ್ರೇಜಿ 4 ಒಂದು ಲಘು ಹಾಸ್ಯ ಚಿತ್ರವಾಗಿದ್ದು, ಇದರಲ್ಲಿ ಅರ್ಷದ್ ವಾರ್ಸಿ, ರಾಜ್ಪಾಲ್ ಯಾದವ್, ಇರ್ಫಾನ್ ಯಾದವ್, ಸುರೇಶ್ ಮೆನನ್ ಹಾಗೂ ಜೂಹಿ ಚಾವ್ಲಾ ನಟಿಸಿದ್ದಾರೆ. ಚಿತ್ರ ಏಪ್ರಿಲ್ 11 ರಂದು ಬಿಡುಗಡೆಗೊಳ್ಳಲಿದೆ.