ಸುದೀರ್ಘಕಾಲದ ಪ್ರೇಮ ಜೋಡಿಯಾಗಿದ್ದ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಅತಿಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆಯೇ? ಸಲ್ಲು ಮಿಯಾನ ಹತ್ತಿರ ಸ್ನೇಹಿತರ ಮಾತನ್ನು ನಂಬುವುದಾದರೆ ಇದು ಹೌದು.
ಅನೇಕ ಹುಡುಗಿಯರಿಂದ ಕೈ ಕೊಡಿಸಿಕೊಂಡಿರುವ ಭಗ್ನಹೃದಯಾಗಿರುವ, ಈ ಸುರಸುಂದರಾಂಗನನ್ನು ಗೆಳತಿ ಕತ್ರಿನಾ ಕೈಹಿಡಿಯವುದು ಬಹುತೇಕ ನಿಶ್ಚಿತವಾದಂತಿದೆ. ಐಶ್ ಜತೆಗಿನ ಪ್ರೇಮ ಮುರಿದು ಬಿದ್ದ ಬಳಿಕ ಕತ್ರಿನಾ ಸಲ್ಮಾನ ಹೃದಯಕ್ಕೆ ಪ್ರೇಮದ ಸಿಂಚನ ಸಿಂಪಡಿಸಿದ್ದರು. ಇದೀಗ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ ಎನ್ನುವುದು ಖಚಿತಗೊಂಡಂತೆ ಕಾಣುತ್ತದೆ.
ತನ್ನ ವೈಯುಕ್ತಿಕ ಬದುಕನ್ನು ಸಲ್ಮಾನ್ ಎಂದೂ ಮಾಧ್ಯಮದ ಎದುರು ಹೇಳಿಕೊಂಡಿರಲಿಲ್ಲ. ಆದರೆ ಈ ಬಾರಿ ತಮ್ಮ ದೀರ್ಘಕಾಲದ ಗೆಳತಿ ಕತ್ರೀನಾ ಕೈಫ್‌ರನ್ನು ಮದುವೆಯಾಗುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.
ಇವರಿಬ್ಬರೂ ಯಾವುದೇ ಅಧಿಕೃತ ಘೋಷಣೆಯನ್ನು ಮಾಡದಿದ್ದರೂ ಸಹ ಈ ಸುದ್ಧಿಯು ಬಹುತೇಕ ಖಚಿತಗೊಂಡಂತಿದೆ. ಮದುವೆಯು ಯಾವುದೇ ಪ್ರಚಾರಕ್ಕೆ ಅವಕಾಶ ಇಲ್ಲದಂತೆ ನೆರವೇರಿಸಲಾಗುವುದು ಮತ್ತು ಅತ್ಯಾಪ್ತ ಸಂಬಂಧಿಗಳು ಮತ್ತು ಗೆಳೆಯರ ಸಮಕ್ಷಮದಲ್ಲಿ ನಡೆಯಲಿದೆ ಎನ್ನುವ ಸುದ್ದಿ ಇದೆ. ಕಾದು ನೋಡೋಣ. ಶುಭಸ್ಯಂ ಶೀಘ್ರಂ.