ಭಾರತೀಯ ಚಿತ್ರಗಳಲ್ಲಿ ಹಾಡಲು ಆಸಕ್ತಿ - ಅಫ್ಸಾನ್ ಅಬ್ಬಾಸ್
ಪಾಕಿಸ್ತಾನದ ಹೆಸರಾಂತ ಗಝಲ್ ಗಾಯಕ ಗುಲಾಮ್ ಅಲಿ ಅವರ ಮಾಜಿ ಪತ್ನಿ ಬೇಗಂ ಅಫ್ಸಾನ್ ಅಬ್ಬಾಸ್, ಭಾರತೀಯ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿಯಾಗಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.
ಪಾಟಿಯಾಲಾ ಸಮೀಪದ "ಫನ್ ವಿಲ್ಲಾ," ದಲ್ಲಿ ಮಾತನಾಡಿದ ಅವರು," ಹಿಂದಿ ಚಿತ್ರಗಳಲ್ಲಿ ಪಂಜಾಬಿ ಹಾಡುಗಳ ಸೊಗಡು ಹೇರಳವಾಗಿದೆ. ಪಂಜಾಬಿ ಮಾಧುರ್ಯವಿಲ್ಲದೇ ಯಾವ ಚಿತ್ರವೂ ಸಹ ಯಶಸ್ಸು ಗಳಿಸಿಲ್ಲ" ಎಂದಿದ್ದಾರೆ.
"ಬಾಲಿವುಡ್ ಉದ್ಯಮವು ಪಂಜಾಬಿ ಬಿಟ್ಸ್‌ಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದೆ ಮತ್ತು ಪಾಕಿಸ್ತಾನ ಹೆಚ್ಚು ಹೆಚ್ಚು ಪಂಜಾಬಿ ಗಾಯಕರನ್ನು ಹುಟ್ಟು ಹಾಕುತ್ತಿದೆ. ಸಾಂಪ್ರದಾಯಿಕ ಬೇಡಿಕೆ ಮತ್ತು ಬಾಲಿವುಡ್‌ನ ಪಂಜಾಬಿ ಸಂಗೀತ ಸಹಜವಾಗಿಯೇ ಪರಸ್ಪರ ಸಂಧಿಸಿವೆ" ಎಂದು ಆಕೆ ಅಭಿಪ್ರಾಯಿಸಿದ್ದಾರೆ.
ತಮಗೆ, ಭಾರತೀಯ ಚಿತ್ರೋದ್ಯಮದಿಂದಾಗಲಿ ಅಥವಾ ಭಾರತೀಯ ಮ್ಯೂಸಿಕ್ ಕಂಪನಿಯಿಂದ ಯಾವುದೇ ಆಫರ್ ಬಂದಿಲ್ಲ. ಆದರೆ ತಾವು ಭಾರತೀಯ ಚಿತ್ರಗಳಲ್ಲಿ ಹಾಡಲು ಹೆಚ್ಚಿನ ಆಸಕ್ತಿ ಹೊಂದಿರುವುದಾಗಿ ನುಡಿದರು.