ಛಾಪಾ ಕಾಗದ ಕಾಂಡದ ಪ್ರಮುಖ ಸೂತ್ರದಾರಿ ಅಬ್ದುಲ್ ಕರೀಂ ಲಾಲಾ ತೆಲಗಿ ಜೀವನಾಧಾರಿತ ವಿವಾದಿತ ಮುದ್ರಾಂಕ (ದಿ ಸ್ಟಾಂಪ್) ಹಿಂದಿ ಚಲನ ಚಿತ್ರವು ಮುಂದಿನ ವಾರ ಬಿಡುಗಡೆಯಾಗಲು ಸಿದ್ಧವಾಗಿದೆ.ಪುಣೆ ನ್ಯಾಯಾಲಯವು ಚಿತ್ರವನ್ನು ಸಾರ್ವಜನಿಕ ವೀಕ್ಷಣೆಗೆ ಒಪ್ಪಿಗೆ ಸೂಚಿಸಿದ್ದು ದೇಶಾದ್ಯಂತ ಮುಂದಿನ ವಾರ ಚಿತ್ರವು ತೆರೆ ಕಾಣಲಿದೆ.
ನ್ಯಾಯಾಲಯ ಒಪ್ಪಿಗೆ ಸೂಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಕೀರ್ ಶೇಖ್ ಅವರು ನೀಜ ಜೀವನದ ಘಟನೆಗಳನ್ನು ಆಧರಿಸಿ ಬಂದ ಮಣಿರತ್ನಂ ನಿರ್ದೇಶನದ ಬಾಂಬೆ ಮತ್ತು ಅನುರಾಗ್ ಬಸು ಅವರ ಬ್ಲ್ಯಾಕ್ ಫ್ರೈಡೆಯ ರೀತಿಯಲ್ಲಿ ಜನರು ಮುದ್ರಾಂಕವನ್ನು ಸ್ವೀಕರಿಸುತ್ತಾರೆ ಎಂದು ಹೇಳಿದರು.
ಮರಾಠಿ ಚಲನಚಿತ್ರ ರಂಗದ ಹಿನ್ನಲೆಯಿಂದ ಬಂದಿರುವ ಶಕೀರ್ ಶೇಖ್ ಅವರು ಮೊದಲ ಬಾರಿಗೆ ಬಾಲಿವುಡ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅಬ್ದುಲ್ ಕರೀಂ ಲಾಲಾ ತೆಲಗಿ ಸೆನ್ಸರ್ ಬೋರ್ಡ್ ಮಂಡಳಿಯಲ್ಲಿ ತನ್ನ ನೀಜ ಜೀವನವನ್ನು ಆಧರಿಸಿ ನಿರ್ಮಿಸಿರುವ ಚಿತ್ರದ ವಿರುದ್ಧ ಅಪಸ್ವರ ಎತ್ತಿದ್ದರು.
IFM
ಮುದ್ರಾಂಕ ಚಿತ್ರದಲ್ಲಿ ತೆಲಗಿ ಪಾತ್ರದಲ್ಲಿ ಮರಾಠಿ ರಂಗ ಕಲಾವಿದ ಕೈಲಾಶ್ ಮಾನವ್ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಖ್ಯಾತ ಬಾಲಿವುಡ್ ತಾರೆಗಳು ಇಲ್ಲದಿದ್ದರೂ ನಾಲ್ಕು ಹಾಡುಗಳು ಇವೆ. ಐಟಂ ಗರ್ಲ್‌ಗಳಾದ ರಾಖಿ ಸಾವಂತ್ ಮತ್ತು ಸಂಭಾವನಾ ಸೇಠ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಡುಗಳಿಗೆ ಉಷಾ ಉತ್ತುಪ್, ಸುನಿಧಿ ಚೌಹಾನ್ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದ್ದಾರೆ. ಮೇ 23 ರಂದು ತೆರೆ ಕಾಣಲಿರುವ ಮುದ್ರಾಂಕವು ರಾಜಕಾರಣಿ, ಅಧಿಕಾರಿ ಮತ್ತು ಅಪರಾಧಿಗಳ ನಡುವಿನ ಸ್ವಾರ್ಥ ಸಂಬಂಧವನ್ನು ಬಯಲಿಗೆ ಎಳೆಯುತ್ತದೆ.