ಕಳೆದ ವರ್ಷದ ಬಾಲಿವುಡ್ ಭರ್ಜರಿ ಯಶಸ್ಸಿನ ಚಿತ್ರ 'ಚಕ್ ದೇ ಇಂಡಿಯಾ'ದಲ್ಲಿ ಮೇರಿ ರಾಲ್ಟೆ ಪಾತ್ರ ನಿರ್ವಹಿಸಿದ್ದ ಮಿಜೋರಾಂನ ಗೋಲ್ ಕೀಪರ್ ಕಿಮಿ ಲಾಲ್ಡಾವ್ಲಾ ಅವರು ಹಾಕಿ ಕುರಿತ ಡಿಪ್ಲೊಮಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ!
ಐದು ಫಿಲಂ ಫೇರ್ ಪ್ರಶಸ್ತಿಗಳು, ಐದು ಸ್ಟಾರ್ ಸ್ಕ್ರೀನ್ ಪ್ರಶಸ್ತಿಗಳು ಹಾಗೂ ಒಂದು ಬಿಲ್ಲೀ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು ಚಕ್ ದೇ ಇಂಡಿಯಾ. ಆದರೆ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೂ ಕಿಮಿ ಹಾಜರಾಗಿರಲಿಲ್ಲ, ಇದಕ್ಕೆ ಕಾರಣವೆಂದರೆ ಆಕೆ ಡಿಪ್ಲೊಮಾ ಪರೀಕ್ಷೆಗೆ ಓದುತ್ತಿದ್ದರು. ಭೋಪಾಲದಲ್ಲಿ 2006ರಲ್ಲಿ ನಡೆದಿದ್ದ ಜೂನಿಯರ್ ಹಾಕಿ ಶಿಬಿರದ ಸಂದರ್ಭ ಕಿಮಿ ಈ ಚಿತ್ರಕ್ಕೆ ಸಹಿ ಹಾಕಿದ್ದರು.
ತಾನು ಮತ್ತಷ್ಟು ಅಧ್ಯಯನ ಮಾಡುತ್ತೇನೆ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಪ್ಲಿಮೆಂಟರಿ ಪರೀಕ್ಷೆಗೆ ಕುಳಿತುಕೊಳ್ಳುವುದಾಗಿ ಕಿಮಿ ತಿಳಿಸಿದ್ದಾರೆ. ತನಗೆ ಸಾಕಷ್ಟು ಮಾಡೆಲಿಂಗ್ ಮತ್ತು ಫಿಲ್ಮ್ ಆಫರ್ಗಳಿದ್ದರೂ, ಹಾಕಿ ಕೋಚ್ ಆಗಲು ಪ್ರಯತ್ನಿಸುವುದಾಗಿ ಕಿಮಿ ಹೇಳಿದ್ದಾರೆ.