ಅಮಿರ್ ಖಾನ್ ಬ್ಲಾಗ್ ಸುದ್ದಿ ಓದಿದ್ದೆವಲ್ಲ, ಇದು ಸಲ್ಮಾನ್ ಖಾನ್ ಬ್ಲಾಗ್ ಸುದ್ದಿ.
ನಾನೊಬ್ಬ ಮೂಡಿ, ಸಿನಿಕ ಎಂಬುದಾಗಿ ಕೆಲವರು ಭಾವಿಸುತ್ತಾರೆ, ಆದರೆ ನನ್ನೆಲ್ಲ ನಿರ್ಧಾಗಳು ಆಂತರ್ಯದ ಧ್ವನಿಯೇ ವಿನಹ, ಲೆಕ್ಕಾಚಾರದ್ದಲ್ಲ ಎಂದು ತನ್ನ ಬ್ಲಾಗಿನ ಮೊದಲ ಬರಹದಲ್ಲಿ ಹೇಳಿದ್ದಾರೆ ಸಲ್ಮಾನ್.
"ನನ್ನನ್ನು ನಂಬಿ, ನಾನು ನನ್ನ ಜೀವನದುದ್ದಕ್ಕೂ ಯಾವಾಗಲು ನನ್ನ ಆಂತರ್ಯದ ಧ್ವನಿ ಹಾಗೂ ಹೃದಯದ ಮಾತನ್ನು ಕೇಳುತ್ತೇನೆ. ನಾನು ಬುದ್ಧಿವಂತಿಕೆ, ವಿಶ್ಲೇಷಣೆ ಮತ್ತು ಲೆಕ್ಕಾಚಾರಗಳನ್ನು ವಿಪರೀತವಾಗಿ ಅವಲಂಭಿಸುವುದಿಲ್ಲ" ಎಂದು ಸಲ್ಲುಮಿಯಾ ಹೇಳಿಕೊಂಡಿದ್ದಾರೆ.
ಕೆಲವು ಭಗ್ನಪ್ರೇಮ ಪ್ರಕರಣಗಳು, ಅಪಘಾತ ಪ್ರಕರಣ ಮುಂತಾದುವುಗಳಲ್ಲಿ ಕೆಟ್ಟಹುಡುಗನಾಗಿ ಬಿಂಬಿತನಾಗಿದ್ದ ಈತ ತನ್ನ ವೃತ್ತಿಯಲ್ಲಿ ಮಾತ್ರ ಗೆಲವು ಸಾಧಿಸಿದಾತ. ಇವರಿಗೆ ಟಿವಿ ಆಂಕರ್ ಆಗುವ ಕುರಿತು ತನ್ನದೆ ಆದ ಅಭಿಪ್ರಾಯಗಳಿದ್ದುವಂತೆ. ಈ ಹಿಂದೊಮ್ಮೆ ಅವರ ಸಹೋದರ ಸೊಹೈಲ್ ಖಾನ್ ಸೋನಿ ಟಿವಿ ಪ್ರಸ್ತಾಪವೊಂದನ್ನು ತಂದಾಗ ಅವರು ಅದನ್ನು ಅಲ್ಲಗಳೆದಿದ್ದರಂತೆ. ಅದು ತುಂಬ ಅಪ್ರಯೋಗಿಕವಾದುದು ಎಂದು ಅವರಿಗೆ ಅನಿಸಿದ ಕಾರಣ ಒಂದು ಕ್ಷಣವೂ ಯೋಚಿಸದೆ ಇಲ್ಲ ಅಂದಿದ್ದೆ ಎಂದು ಹೇಳಿಕೊಂಡಿದ್ದಾರೆ.
ಆದರೆ, ಇದೀಗ ಅದೇ ಸೋನಿಯ ರಿಯಾಲಿಟಿ ಶೋ 'ದಸ್ ಕಾ ದಮ್' ಒಪ್ಪಿಕೊಳ್ಳಲು ಕಾರಣವೇನು? ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋತರೆ ನಾಚಿಕೆ ಇಲ್ಲವೇ ಬೇಸರ ಯಾವುದೂ ಇಲ್ಲವಂತೆ. ಉತ್ತರಗಳು ಶೇಕಡಾವಾರು ಲೆಕ್ಕಾಚಾರದ್ದು. ನಿಖರ ಉತ್ತರಕ್ಕೆ ಅತಿ ಹೆಚ್ಚು ನಿಕಟವಾದ ಉತ್ತರ ನೀಡಿದವರಿಗೆ ಗೆಲುವು. ಇದು ತುಂಬ ಸರಳ ಹಾಗೂ 'ಗೆಸ್ ಗೇಮ್' ಎಂದು ಸಲ್ಲು ಹೇಳಿದ್ದಾರೆ.
ಇದು ಅಮೆರಿಕದ ಪವರ್ ಆಫ್ 10 ನಿಂದ ಸ್ಫೂರ್ತಿಗೊಂಡ ಆಟ. ಇಲ್ಲಿ ಸ್ಫರ್ಧಿಯೊಬ್ಬ ಸಾರ್ವಜನಿಕರ ಪ್ರತಿಕ್ರಿಯೆಯನ್ನು ನಿಖರವಾಗಿ ಊಹಿಸಿದನೆಂದರೆ, ಮಿಲಿಯಾಧಿಪತಿಯಾಗಿ ಹೊರನಡೆಯಬಹುದು. ಜೂನ್ 6ರಂದು ಸ್ಫರ್ಧೆ ಆರಂಭಗೊಳ್ಳುತ್ತದೆ.