ಮುಂಬೈ : ಅನೇಕ ವಿದೇಶಿ ಕಲಾವಿದರ ಧ್ವನಿ ಪರೀಕ್ಷೆಯ ನಂತರ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರ ಧ್ವನಿಯನ್ನು ಅಲಿಬಾಬಾ ಮತ್ತು 40 ಕಳ್ಳರು ಅನಿಮೇಶನ್ ಚಿತ್ರಕ್ಕೆ ಅಂತಿಮಗೊಳಿಸಲಾಗಿದ್ದು, ಸೌಮಿತ್ರಾ ರಾನಡೆ ಅವರು ಚಿತ್ರವನ್ನು ನಿರ್ಮಿಸಲಿದ್ದಾರೆ.
ಬಾಲಿವುಡ್ ಹಂಗಾಮಾದೊಂದಿಗೆ ಮಾತನಾಡಿದ ಸೌಮಿತ್ರಾ ಜಾನ್ ಅಬ್ರಾಹಂ ಅವರ ಧ್ವನಿಯನ್ನು ನಾಯಕ ಅಲಿಬಾಬಾ ಅವರ ಪಾತ್ರಕ್ಕೆ ಪಡೆಯಲಾಗಿದೆ. ಸೌರಭ್ ಶುಕ್ಲಾ, ರಝಾ ಮುರಾದ್ ಮತ್ತು ಮುಕೇಶ್ ತಿವಾರಿ ಅವರು ಇನ್ನಿತರ ಪಾತ್ರಗಳಲ್ಲಿದ್ದಾರೆ ಎಂದು ಹೇಳಿದ್ದಾರೆ.
ಅಲಿಬಾಬಾ ಮತ್ತು 40 ಕಳ್ಳರು ಕಥಾವಸ್ತು ಮುಂಬೈನಲ್ಲಿ ವಾಸವಾಗಿರುವ ಚಿಂಕೂ ಎನ್ನುವ ಬಾಲಕನ ಕುರಿತಾಗಿ ಇದ್ದು ಅರೇಬಿಯನ್ ನೈಟ್ಸ್ ಕಥೆಯ ರೂಪದಲ್ಲಿ ಬರಲಿದೆ. ಚಿತ್ರಕ್ಕೆ ಸಂಗೀತವನ್ನು ಥ್ರಿ ಬ್ರದರ್ಸ್ ಆಂಡ್ ವೈಲಿನ್ ನೀಡಿದ್ದು 2009ರಲ್ಲಿ ತೆರೆಗೆ ಬರಲಿದೆ ಎಂದು ಸೌಮಿತ್ರಾ ಹೇಳಿದ್ದಾರೆ.