ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಐಐಎಫ್ಎ: ದೀಪಿಕಾ, ರಣಬೀರ್‌ಗೆ ಪ್ರಶಸ್ತಿ
ಸುದ್ದಿ/ಗಾಸಿಪ್
Feedback Print Bookmark and Share
 
ಭಾನುವಾರ ರಾತ್ರಿ ಬ್ಯಾಂಕಾಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರ ಅಕಾಡೆಮಿ (ಐಐಎಫ್ಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಹೊಸ ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರು ಅತ್ಯುತ್ತಮ ನವ ನಟ-ನಟಿ ಪ್ರಶಸ್ತಿಗೆ ಭಾಜನರಾಗಿದ್ದರೆ, ಓಂ ಶಾಂತಿ ಓಂ ಚಿತ್ರವು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು.

ಕಪೂರ್ ಅವರು ತಮ್ಮ ಸಾವರಿಯಾ ಚಿತ್ರದ ಅಭಿನಯಕ್ಕೆ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ದೀಪಿಕಾ ಅವರು ಓಂ ಶಾಂತಿ ಓಂ ನಟನೆಗಾಗಿ ಪುರಸ್ಕರಿಸಲ್ಪಟ್ಟರು. ಓಂ ಶಾಂತಿ ಓಂ ಚಿತ್ರಕ್ಕೆ ಉತ್ತಮ ಸ್ಪೆಶಲ್ ಎಫೆಕ್ಟ್ ಹಾಗೂ ಕಲಾ ನಿರ್ದೇಶನ ವಿಭಾಗದಲ್ಲೂ ಪ್ರಶಸ್ತಿ ದೊರೆಯಿತು.

ಪ್ರಮುಖ ಬಾಲಿವುಡ್ ತಾರಾ ಗಡಣ ಹಾಜರಿದ್ದ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರಿಗೆ ವಿಶೇಷ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತಿಷ್ಠಿತ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು 'ಚಕ್ ದೇ ಇಂಡಿಯಾ' ನಿರ್ದೇಶಕ ಶಿಮಿತ್ ಅಮಿನ್ ಅವರಿಗೆ ದೊರೆಯಿತು. ಅಂತೆಯೇ ಮಣಿರತ್ನಂ ಅವರ ಗುರು ಚಿತ್ರದ ಸಂಗೀತಕ್ಕಾಗಿ ಎ.ಆರ್.ರೆಹಮಾನ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಓಂ ಶಾಂತಿ ಓಂನ ಗೀತೆಯ ಸಾಹಿತ್ಯಕ್ಕಾಗಿ ಜಾವೇದ್ ಅಖ್ತರ್‌ಗೆ ಉತ್ತಮ ಗೀತೆಸಾಹಿತ್ಯ ಪ್ರಶಸ್ತಿ, ಸಾವರಿಯಾದ ಗಾಯಕ ಶಾನ್ ಅವರಿಗೆ ಉತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ, ಗುರು ಚಿತ್ರದ ಗಾಯಕಿ ಶ್ರೇಯಾ ಘೋಸಾಲ್ ಅವರಿಗೆ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆಯಿತು.

ಹಾಸ್ಯ ಪಾತ್ರಕ್ಕಾಗಿ ಉತ್ತಮ ನಟ ಪ್ರಶಸ್ತಿಯು ಪಾರ್ಟ್‌ನರ್ ಚಿತ್ರದಲ್ಲಿನ ನಟನೆಗಾಗಿ ಗೋವಿಂದ ಅವರಿಗೆ ದೊರೆಯಿತು. ನೆಗೆಟಿವ್ ಪಾತ್ರದ ಉತ್ತಮ ನಟ ಪ್ರಶಸ್ತಿಯು ಶೂಟೌಟ್ ಅಟ್ ಲೋಖಂಡ್‌ವಾಲಾ ಚಿತ್ರದ ಅಭಿನಯಕ್ಕಾಗಿ ವಿವೇಕ್ ಒಬೆರಾಯ್ ಮತ್ತು ಲೈಫ್ ಇನ್ ಮೆಟ್ರೋದ ನಟನೆಗಾಗಿ ಇರ್ಫಾನ್ ಖಾನ್ ಉತ್ತಮ ಪೋಷಕ ನಟ ಹಾಗೂ ಕೊಂಕಣಾ ಸೇನ್ ಶರ್ಮಾ ಅವರು ಉತ್ತಮ ಪೋಷಕ ನಟಿ ಪ್ರಶಸ್ತಿಗೆ ಪಾತ್ರರಾದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಫ್ಎಫ್ಐಎ: ದೀಪಿಕಾ, ರಣಬೀರ್‌ಗೆ ಪ್ರಶಸ್ತಿ