ಅತಿಕಾತರದ, ನಿರೀಕ್ಷೆಯ, ದುಬಾರಿ ವೆಚ್ಚದ, ಕಮಲಹಾಸನ್ ಅವರ ಮಹತ್ವಾಕಾಂಕ್ಷೆಯ ದಶಾವತಾರಂ ಸಿನಿಮಾ ತಮಿಳು ಹಾಗೂ ತೆಲುಗಿನಲ್ಲಿ ಶುಕ್ರವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಇದೀಗಾಗಲೆ ಕಮಲ್ ಅಭಿಮಾನಿಗಳು ತಮ್ಮ ಪ್ರಿಯ ನಟನ ದಶಾವತಾರದ ಬಗ್ಗೆ ಹೆಬ್ಬೆರಳು ಮೇಲೆತ್ತಿದ್ದಾರೆ.
ಈ ಚಿತ್ರದಲ್ಲಿ 10 ವಿವಿಧ ಪಾತ್ರಗಳನ್ನು ಮಾಡಿ ವಿಶ್ವದಾಖಲೆ ನಿರ್ಮಿಸಿರುವ ಕಮಲ್, ತನ್ನ ಗುರು ಶಿವಾಜಿ ಗಣೇಶನ್ ಅವರ ದಾಖೆ ಮುರಿದಿದ್ದಾರೆ. ನವರಾತ್ರಿ ಸಿನಿಮಾದಲ್ಲಿ ಶಿವಾಜಿ ಗಣೇಶನ್ ಒಂಭತ್ತು ಪಾತ್ರಗಳನ್ನು ಮಾಡಿದ್ದಾರೆ. ಮೈಖೆಲ್ ಮದನ ಕಾಮರಾಜನ್ ಚಿತ್ರದಲ್ಲಿ ಕಮಲ್ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಸಹೋದರ್‌ಗಳ್ ಚಿತ್ರದಲ್ಲಿ ಕುಳ್ಳ ಅಪ್ಪುವಿನ ಪಾತ್ರ ಮಾಡುವ ಮೂಲಕವೂ ಅವರು ಪ್ರೇಕ್ಷಕರ ಮನಗೆದ್ದಿದ್ದರು.
ಚಿತ್ರ ನಿರ್ಮಾಣದ ಮೊದಲ ದಿನದಿಂದಲೇ ಸಮಸ್ಯೆಗಳು ಕಾಡಲು ಆರಂಭವಾಗಿದ್ದವು. ಮೊದಲನೇ ದಿನ ಶೂಟಿಂಗ್ ನಡೆಯಲೇ ಇಲ್ಲ. ಎರಡನೇ ದಿನ ಶೂಟಿಂಗ್ ತೆವಳಿಕೊಂಡು ಸಾಗಿತು. ಒಟ್ಟಿನಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎಂದು ದಕ್ಷಿಣ ಭಾರತದ ಬಹು ಭಾಷಾ ನಟ ಕಮಲ್ ಬಿಡುಗಡೆಗೆ ಮುಂಚಿತವಾಗಿ ಹೇಳಿದ್ದರು.
ಚಿತ್ರದಲ್ಲಿ ಸ್ಪೇಷಲ್ ಎಫೆಕ್ಟ್‌ಗಳಿಗಾಗಿ ಹಾಲಿವುಡ್‌ನಿಂದ ಕರೆತರಲಾಗಿದ್ದ ಬ್ರಿಯಾನ್ ಜೆನ್ನಿಂಗ್ಸ್ ಕೂಡ ಬೃಹತ್ ಚಿತ್ರದ ನಿರ್ಮಾಣ ಸಾಧಾರಣ ಸಂಗತಿಯಾಗಿರಲಿಲ್ಲ. ಮೊದಲ ಬಾರಿಗೆ ಕಮಲ್‌ನನ್ನು ಭೇಟಿಯಾದ ಸಂದರ್ಭದಲ್ಲಿ ಕೇಳಿದ್ದು ನಿನಗೆ ಏನು ಹುಚ್ಚಾ ಎಂದು. ಕಮಲ್ ಮತ್ತು ರವಿಕುಮಾರ್ ಕೈಗೆತ್ತಿಕೊಂಡ ಬೃಹತ್ ಚಿತ್ರಕ್ಕೆ ನಾನು ಸಹಾಯ ಮಾಡಿದರೆ ಸೂಕ್ತ ಎಂದು ಅನ್ನಿಸಿದ್ದು ನಂತರವೇ ಎಂದು ಹೇಳುತ್ತಾರೆ ಬ್ರಿಯಾನ್ ಜೆನ್ನಿಂಗ್ಸ್.
ರವಿಕುಮಾರ್ ಹೇಳುವುದೇ ಬೇರೆ. ಪರಿಶ್ರಮವಿಲ್ಲದೇ ಲಾಭವಿಲ್ಲ ಎಂದು ಕಮಲ್‌ಜಿ ಒಂದು ಸಲ ಹೇಳಿದ್ದರು. ಸ್ವತಃ ಕಮಲ್ ಗಂಟೆ ಗಟ್ಟಲೆ ಸಮಯವನ್ನು ಮೇಕಪ್‌ನಲ್ಲಿ ವ್ಯಯಿಸಿದ್ದಾರೆ. ವಿಭಿನ್ನವಾಗಿ ಚಿತ್ರ ಬರಬೇಕು ಎನ್ನುವ ಒಂದೇ ಉದ್ದೇಶ ಅವರಲ್ಲಿತ್ತು. ಇಡೀ ಚಿತ್ರದ ಶೂಟಿಂಗ್ ಆಸಾಧ್ಯ ನೋವಿನ ಅನುಭವ ನೀಡಿತು ಎನ್ನುತ್ತಾರೆ ಅವರು.
ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್‌ನಿಂದ ಹಿಡಿದು ಹತ್ತು ವಿವಿಧ ಪಾತ್ರಗಳಲ್ಲಿ ಕಮಲ್ ಹಾಸನ ಅಭಿನಯಿಸಿದ್ದಾರೆ. ಇಡೀ ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಟನೊಬ್ಬ ಹತ್ತು ಪಾತ್ರಗಳಲ್ಲಿ ಏಕ ಕಾಲದಲ್ಲಿ ಅಭಿನಯಿಸಿದ ದಾಖಲೆಯನ್ನು ಕಮಲ್ ಹಾಸನ್ ದಶಾವತಾರಮ್‍ನಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ಅಸೀನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ಮಲ್ಲಿಕಾ ಶೆರಾವತ್ ಕೂಡ ಇದ್ದಾರೆ.
ಎರಡು ವಾರಗಳ ನಂತರ ದಶಾವತಾರಮ್‌ನ ಹಿಂದಿ ಅವತರಣಿಕೆ ಬಿಡುಗಡೆಯಾಗಲಿದ್ದು, ಹಿಂದೂ ಧರ್ಮದ ಕೆಲ ಪಂಥಗಳ ಧಾರ್ಮಿಕ ಮನೋಭಾವನೆಗೆಳು ಚಿತ್ರ ಘಾಸಿಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ತಡೆಯಾಜ್ಞೆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.