ಬಾಲಿವುಡ್ ದಂತಕತೆ ಅಮಿತಾಭ್ ಬಚ್ಚನ್ ಅವರು 'ಏಷ್ಯಾದ ಸೆಕ್ಸಿಯೆಸ್ಟ್ ವೆಜಿಟೇರಿಯನ್ ಮ್ಯಾನ್' ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ಪ್ರಾಣಿಗಳ ಹಕ್ಕಿಗಾಗಿ ಕಾರ್ಯವೆಸಗುವ ಪೆಟಾ ಸಂಘಟನೆಯು ನಡೆಸಿರುವ ಜನಮತಗಣನೆಯಲ್ಲಿ ಬಚ್ಚನ್‌ಗೆ ಈ ಹೊಸ ಸ್ಥಾನ ಮಾನ ಲಭಿಸಿದೆ. ಹಾಂಗ್‌ಕಾಂಗ್‌ನ ಹಾಡುಗಾರ್ತಿ ಫಾಯೆ ವಾಂಗ್ ಈ ವಿಭಾಗದ ಮಹಿಳಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಭಾರತದ ಬೆಳ್ಳಿ ಪರದೆಯಲ್ಲಿ ಮಿಂಚುತ್ತಿರುವ, ಅಭಿನಯಕ್ಕೆ ಮುಪ್ಪಡರದ 65ರ ಹರೆಯದ ಅಮಿತಾಭ್ ಬಚ್ಚನ್ ಏಷ್ಯಾದ ರತಿವರ್ಚಸ್ಸಿನ ಸಸ್ಯಾಹಾರಿ ಪುರುಷ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಲೈಫ್‌ಸ್ಟೈಲ್ ಪತ್ರಿಕೆಗಳಾದ ವೋಗ್, ಎಲ್ಲೆ, ಮೇರಿ ಕ್ಲೇರಿ ಪತ್ರಿಕೆಗಳ ಮುಖಪುಟಗಳಲ್ಲಿ ಮಿಂಚಿರುವ ವಾಂಗ್ ಒಬ್ಬ ಯಶಸ್ವೀ ಹಾಡುಗಾರ್ತಿಯೂ ಹೌದು.
ಥೈವಾನಿನ ಬಾರ್ಬಿ ಕ್ಸೂ, ಹಾಂಗ್‌ಕಾಂಗಿನ ಜನಪ್ರಿಯ ನಟಿ ಮ್ಯಾಗಿ ಕ್ಯೂ ಮತ್ತು ಹಾಡುಗಾರ್ತಿ, ನಟಿ ಸ್ಟೆಪಿ ಟಾಂಗ್ ಅವರುಗಳು ರನ್ನರ್ಅಫ್ ಪ್ರಶಸ್ತಿ ಪಡೆದಿದ್ದಾರೆ ಎಂದು ಪೆಟಾ ಏಷ್ಯಾ-ಫೆಸಿಫಿಕ್ ಪೋರ್ಟಲ್ ಹೇಳಿದೆ.
ಸಸ್ಯಾಹಾರಿಯಾಗಿರುವುದು ನಿಮಗೆ, ಪ್ರಾಣಿಗಳಿಗೆ, ಭೂವಿಗೆ ಮತ್ತು ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮ ಮತ್ತು ಸ್ಲಿಮ್ ಮತ್ತು ಸೆಕ್ಸೀ ಆಗಿರಲೂ ಇದಕ್ಕಿಂತ ಸರಳಮಾರ್ಗವಿಲ್ಲ ಎಂದು ಹೇಳಿರುವ ಪೆಟಾ, ಅಮಿತಾಭ್ ಮತ್ತು ಫಾಯೆ ಇದಕ್ಕೆ ನೇರ ಪುರಾವೆ ಎಂದು ಪೆಟಾದ ದಕ್ಷಿಣ ಏಷ್ಯಾ ನಿರ್ದೇಶಕ ಜೆಸನ್ ಬೇಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏಷ್ಯಾದ ಹೊರತಾಗಿ ಪಾಪ್ ತಾರೆ ಲಿಯೋನ ಲೆವಿಸ್, ಹಾಡುಗಾರ್ತಿ ಕ್ರಿಸ್ ಮಾರ್ಟಿನ್ ಮತ್ತು ಟಿವಿ ಆಂಕರ್ ರಸ್ಸೆಲ್ ಬ್ರಾಂಡ್ ಅವರುಗಳು ಸೆಕ್ಸಿಯೆಸ್ಟ್ ಸಸ್ಯಾಹಾರಿ ಸೆಲೆಬ್ರಿಟಿಗಳಾಗಿದ್ದಾರೆ.