ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮರಾಠಿ ಚಿತ್ರ ನಿರ್ಮಾಣಕ್ಕಿಳಿದ ಬಿಗ್ ಬಿ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಎಮ್‌ಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರಿಂದ ಮರಾಠಿ ವಿರೋಧಿ ಎಂಬುದಾಗಿ ತೀವ್ರ ಟೀಕಾ ಪ್ರಹಾರಕ್ಕೊಳಗಾಗಿದ್ದ ಬಾಲಿವುಡ್ಡಿನ ಮಹಾತಾರೆ ಅಮಿತಾಭ್ ಬಚ್ಚನ್ ಅವರು ಇದೀಗ, ಮರಾಠಿ ಚಿತ್ರವೊಂದರ ನಿರ್ಮಾಣದ ಸನ್ನಾಹದಲ್ಲಿದ್ದು ಎಲ್ಲ ಸಿದ್ದತೆಗಳೊಂದಿಗೆ ಸಜ್ಜಾಗಿದ್ದಾರೆ.

ಈ ಹಿಂದೆ ಸುಭಾಶ್ ಘಾಯ್ ಅವರ ನಿರ್ಮಾಣದಲ್ಲಿ, ಗಲ್ಲಾಪೆಟ್ಟಿಗೆ ಹಿಟ್ 'ವಾಲು' ಚಿತ್ರ ನೀಡಿದ್ದ ಉಮೇಶ್ ಕುಲಕರ್ಣಿಯವರು, ನಿರ್ಮಾಣಪೂರ್ವ ಹಂತದಲ್ಲಿರುವ ಇನ್ನೂ ಹೆಸರಿಡದ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಎಫ್‌ಟಿಐಐನ ಹಳೆವಿದ್ಯಾರ್ಥಿಯಾಗಿದ್ದ ಕುಲಕರ್ಣಿ, ಆವೇಳೆ ತಮ್ಮ ಸೀನಿಯರ್ ಆಗಿದ್ದ ಜಯಾ ಬಚ್ಚನ್ ತನ್ನ ಡಿಪ್ಲೊಮೊ ಚಿತ್ರ 'ಗಿರ್ನಿ'ಯನ್ನು ವೀಕ್ಷಿಸಿದ್ದರು ಎಂದು ನುಡಿದರು. "ಅವರು ಚಿತ್ರವನ್ನು ಬಹಳವಾಗಿ ಮೆಚ್ಚಿದ್ದರು ನಂತರ ನಾವು ಸಂಪರ್ಕದಲ್ಲಿದ್ದೆವು. 'ವಾಲು' ಚಿತ್ರದ ನಂತರ ಜೊತೆಯಾಗಿ ದುಡಿಯುವ ಅವಕಾಶವೊಂದಕ್ಕಾಗಿ ಕಾಯುತ್ತಿದ್ದೆವು" ಎಂದು ತಿಳಿಸಿದರು.

" ನಾನು ನನ್ನ ಜೀವನದ ಮೊದಲನೆ ಚಿತ್ರದ ಪ್ರತಿಯನ್ನು ಜಯಜೀಯವರಿಗೆ ತೋರಿಸಿದೆ, ಅವರು ಇಷ್ಟಪಟ್ಟರು. ನಾನು, ಜಯಜೀ, ಎ ಬಿ ಕಾರ್ಪೊರೇಶನ್‌ನ ಸಿಇಒ ರಮೇಶ ಪುಲಪಾಕ ಸೇರಿ ಈ ಚಿತ್ರವನ್ನು ಮರಾಠಿಯಲ್ಲಿ ನಿರ್ಮಿಸಬೇಕೆಂದು ತಿರ್ಮಾನಿಸಿದೆವು" ಎಂದು ಕುಲಕರ್ಣಿ ತಿಳಿಸಿದರು.

ಇದು 12ರ ಪ್ರಾಯದ ಹುಡುಗನೊರ್ವ ಧಾರ್ಮಿಕ ಭಾವನೆಯೊಂದಿಗೆ ಜೀವನದತ್ತ ದೃಷ್ಟಿಸುವ ಸಮಕಾಲೀನ ಕತೆಯನ್ನೊಳಗೊಂಡಿರುವ ಚಿತ್ರ ಎಂದಷ್ಟೆ ನುಡಿದ ಅವರು ಹೆಚ್ಚಿನ ಮಾಹಿತಿಯನ್ನು ಬಹಿರಂಗಗೊಳಿಸಲು ನಿರಾಕರಿಸಿದರು. ಆದರೆ, "ಇದು ಮಕ್ಕಳ ಚಿತ್ರವಲ್ಲ"ಎಂದು ಅವರು ಪ್ರತಿಪಾದಿಸಿದರು.

ಚಿತ್ರದ ತಾರಾಗಣವನ್ನು ನಿರ್ಧರಿಸಲಾಗಿಲ್ಲ. ಈ ವರ್ಷದ ಆಗಸ್ಟ್-ಸೆಪ್ಟಂಬರ್‌ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ ಎಂದು ನುಡಿದ ಕುಲಕರ್ಣಿ, "ಚಿತ್ರದ ಚಿತ್ರೀಕರಣವು ಪೂನಾ ಹಾಗು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ನಡೆಯಲಿದೆ" ಎಂದೂ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮರಾಠಿ ಚಿತ್ರ, ಬಿಗ್ ಬಿ, ರಾಜ್ ಠಾಕ್ರೆ