ಸೈಫ್ಗೆ ಕರೀನಾಳನ್ನು ಬಿಟ್ಟಿರಲಾರದಷ್ಟು ಪ್ರೀತಿ ಉಕ್ಕುತ್ತಿದೆ. ಕಣ್ಣಲ್ಲಿ ತುಂಬಿದಷ್ಟೂ ಸಾಕೆನಿಸುತ್ತಿಲ್ಲ. ತನ್ನ ಒಲವಿನ ಹುಡುಗಿಯೊಂದಿರಬೇಕು ಎಂಬ ಒಂದೇ ಕಾರಣಕ್ಕಾಗಿ ಈ ಸೈಫ್ ಅರ್ಧದಷ್ಟು ವಿಶ್ವಪರ್ಯಟನೆ ಮಾಡಿದ್ದಾರೆ. ಆದರೆ ಸೈಫ್ನ ಪ್ರೇಮ ತೀವ್ರತೆಯ (ಕರೀನಾಳ ಟ್ಯಾಟೊವನ್ನು ನೆನಪಿಸಿಕೊಳ್ಳಿ) ಆಳ ತಿಳಿದಿದ್ದವರಿಗೆ ಇದೊಂದು ಅಶ್ಚರ್ಯಕರ ಸುದ್ದಿಯಾಗಲಾರದು.
ಕಿಂಗ್ ಖಾನ್ನೊಂದಿಗೆ "'ಟೆಂಪ್ಟೆಶನ್" ಕಾರ್ಯಕ್ರಮಕ್ಕಾಗಿ ವಿಶ್ವಪರ್ಯಟನೆಯಲ್ಲಿ ತೊಡಗಿರುವ ತನ್ನ ಮನದರಸಿ ಕರೀನಾಳನ್ನು ನೋಡಲು ಸೈಫ್ ಲಂಡನ್ನಿಂದ ಅಮ್ಸ್ಟರ್ಡಮ್ಗೆ ಹಾರಿದ್ದಾರೆ.
IFM
ಸೈಫ್ನ ನಿರಂತರ ಒಡನಾಟವು ಕಿರಿಕಿರಿಗೆ ಹಾದಿಯಾಗಿದೆ ವದಂತಿಗಳು ಹಬ್ಬುತ್ತಿರುವುದರಿಂದ, ತನ್ನ ಅಮ್ಸ್ಟರ್ಡಮ್ ಭೇಟಿಯನ್ನು ಅವರು ಗುಪ್ತವಾಗಿರಿಸಲು ನಿರ್ಧರಿಸಿದ್ದರೂ, ಸುದ್ದಿಮಾತ್ರ ಹಬ್ಬಿದೆ. ಹಾಗಾಗಿ ತಮ್ಮ ನೃತ್ಯ ತಂಡದೊಂದಿಗೆ ಹೆಜ್ಜೆ ಹಾಕುತ್ತಿದ್ದ ಕರೀನಾರನ್ನು ಕಾಣಲು ಅಡಗಿಅಡಗಿ ಅವರು ಬರಬೇಕಾಯ್ತಂತೆ.
ಸೈಫ್ರ ಈ ಪ್ರೇಮತೀವ್ರತೆಯಿಂದಾಗಿ ಅವರ ಪ್ರೀತಿಯ ಆಳ ಎಷ್ಟೆಂದು ಪ್ರಪಂಚಕ್ಕೆ ಅರಿವಾಗಿದೆ. ಇದರಿಂದ ಅವರಿಬ್ಬರ ನಡುವೆ ಒಡಕುಂಟಾಗಿದೆ ಎಂಬ ಸುದ್ದಿಗಳನ್ನು ತಳ್ಳಿಹಾಕಬಹುದು.