ಅಮೀರ್ ಖಾನ್ ಈಗ ಬಹಳ ಖುಷಿಯಾಗಿದ್ದಾರೆ! ಬಾಕ್ಸ್ ಅಫೀಸ್ ದಾಖಲೆಗಳನ್ನು ಪುಡಿಗಟ್ಟುತ್ತಿರುವ 'ಜಾನೆ ತೂ ಜಾನೆ ನಾ' ವರ್ಷದ ಅತಿದೊಡ್ಡ ಲಾಭಪ್ರದ ಚಿತ್ರವಾಗುವ ನೀರಿಕ್ಷೆಗಳನ್ನೂ ಹುಟ್ಟುಹಾಕಿದೆ. ಅಂಕೆ ಸಂಖ್ಯೆಗಳ ಬಗ್ಗೆ ಮಾತುಕತೆ ನಡೆಸುವಾಗ ಪುಳಕಗೊಂಡಿರುವ ಅಮೀರ್ ತಮ್ಮ ಸಂತೋಷವನ್ನು ಮುಚ್ಚಿಡದಾದರು. ಭಾರತದಲ್ಲಷ್ಟೆ ಅಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಈ ಚಿತ್ರ ಉತ್ತಮ ಕಾರುಬಾರು ನಡೆಸಿದೆ (ವಿದೇಶಿ ವಿತರಕ ಯುಟಿವಿ ಮುಡಿಗೆ ಯಶಸ್ಸಿನ ಇನ್ನೊಂದು ಗರಿ)
"ಈ ಪ್ರತಿಕ್ರಿಯೆ ಊಹೆಗೆ ಮೀರಿದ್ದು. ಬಿಡುಗಡೆಗೆ ಮೊದಲು ನಾನು ಭಯಗೊಂಡಿದ್ದೆ. ಪ್ರತಿಕ್ರಿಯೆಯ ಬಗ್ಗೆ ಚಿಂತಿತನಾಗಿದ್ದೆ. ನಾನು ಯಶಸ್ಸಿನ ಶ್ರೇಯವನ್ನು ಅಬ್ಬಾಸ್‌ರಿಗೆ (ಟೈರ್‌ವಾಲಾ) ನೀಡಲು ಬಯಸುತ್ತೇನೆ. ಅವರು ಮತ್ತು ಅವರ ತಂಡ ನೈಜವಾದ ಉತ್ತಮ ಚಿತ್ರ ನೀಡಲು ಶ್ರದ್ಧೆಯಿಂದ ಅತೀವ ಶ್ರಮ ಪಟ್ಟಿದ್ದಾರೆ" ಎನ್ನುತ್ತಾರೆ ಚಿತ್ರದ ಪ್ರಚಾರಕ್ಕಾಗಿ ವಿವಿಧ ನಗರ ಪರ‌್ಯಟನೆ ಮಾಡುತ್ತಿರುವ ಮೃದುಭಾಷಿ ನಟ ಮತ್ತು ನಿರ್ದೆಶಕ ಅಮೀರ್. ಅವರು ಪ್ರಸ್ತುತ ನಾಗಪುರದಲ್ಲಿದ್ದಾರೆ.
ಅಮೀರ್ ಖಾನ್‌ರ ಬ್ರಾಂಡ್ ಎಂದರೆ ಅದು ಗುಣಮಟ್ಟದ ಚಿತ್ರಕ್ಕೆ ಸಮನಾರ್ಥಕ ಎಂದುದಕ್ಕೆ ಅವರು ಸಂಕೊಚಗೊಂಡು "ಇಲ್ಲ, ಶ್ಲಾಘನೆ ಅಬ್ಬಾಸ್ ಮತ್ತು ಅವರ ತಂಡಕ್ಕೆ ಸೇರಬೇಕಾದುದು. ನಟರನ್ನು ಸೇರಿ ಚಿತ್ರತಂಡದ ಎಲ್ಲರು ಅತ್ಯುತ್ತಮ ಫಲಿತಾಂಶ ನೀಡಿದ್ದಾರೆ" ಎನ್ನುತ್ತಾರೆ
ಈ ಹರ್ಷೋತ್ಕರ್ಷದ ನಡುವೆ, ಅಮೀರ್ ಹೆಸರನ್ನು ವಿವಾದಗಳ ನಡುವೆ ಎಳೆತರಲಾಗುತ್ತಿದೆ. ವರದಿಗಳ ಪ್ರಕಾರ ಹ್ಯಾರಿ ಮತ್ತು ಹರ್‌ಮಾನ್ ಬೆವಜಾ ಅವರು ಅಮೀರ್ ಕಡೆ ಬೆರಳು ನೆಟ್ಟು ಉದ್ದೇಶಪೂರ್ವಕವಾಗಿ ಹಾನಿ ಮಾಡಲೆತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಬಾಲಿಶ ಎನ್ನುತ್ತಾ ಅಮೀರ್ ತಳ್ಳಿಹಾಕುತ್ತಾರೆ.
ಈ ಬಗ್ಗೆ ವಿಸ್ತೃತವಾಗಿ "ಹ್ಯಾರಿ ಮತ್ತು ಹರ್‌ಮಾನ್‌ರನ್ನು ನಾನು ದೂರದರ್ಶನದಲ್ಲಿ ವೀಕ್ಷಿಸಿದ್ದೇನೆ. ಅವರ ಹೇಳಿಕೆಗಳನ್ನು ಪತ್ರಿಕೆಗಳಲ್ಲೂ ಓದಿದ್ದೇನೆ. ನಾನು 20 ವರ್ಷಗಳಿಂದ ನಟನಾಗಿದ್ದೇನೆ. ಸುಮಾರು 5 ದಶಕಗಳಿಂದ ಚಿತ್ರ ತಯಾರಿಸುತ್ತಿರುವ ಕುಟುಂಬಕ್ಕೆ ಸೇರಿದ್ದೇನೆ. ಒಂದು ಚಿತ್ರ ತಯಾರಿಸಲು ಎಷ್ಟು ಶ್ರಮ ಪಡಬೇಕಾಗುತ್ತದೆ ಎಂಬುದರ ಅರಿವು ನನಗಿದೆ. ನಾನು ಯಾಕೆ ಇನ್ನೊಬ್ಬರಿಗೆ ಕೇಡುಂಟು ಮಾಡಲು ಬಯಸಬೇಕು?ಎಂದು ಪ್ರಶ್ನಿಸುವ ಅಮೀರ್ ಕೇಡುಂಟು ಮಾಡುವುದಿರಲಿ ಹ್ಯಾರಿ ಮತ್ತು ಹರ್‌ಮಾನ್‌ರು ಸೇರಿದಂತೆ ನಾನು ಯಾರೊಬ್ಬರಿಗೂ ಕೆಡಕು ಬಯಸುವ ಕುರಿತು ಚಿಂತಿಸಲಾರೆ ಕೂಡ" ಎನ್ನುತ್ತಾರೆ.
ಅದೇ ಉಸಿರಿನಲ್ಲಿ ಮುಂದುವರೆಸುತ್ತಾ "ನಾನು ಅವರಿಗೆ(ಬೆವಜಾ) ಒಳಿತಾಗಲೆಂದು ಹಾರೈಸುತ್ತೇನೆ. ಏಳು ಬೀಳುಗಳು ಈ ಉದ್ಯಮದ ಅವಿಭಾಜ್ಯ ಅಂಗ, ಹಾಗೆಂದು ಇತರರ ಕಡೆಗೆ ಬೆರಳು ತೋರಿಸಿ ದೂಷಿಸುತ್ತಾ ತಿರುಗುವುದು ಸರಿಯಲ್ಲ. ನನ್ನನ್ನು ಯಾಕೆ ಇವೆಲ್ಲದರ ನಡುವೆ ಸಿಲುಕಿಸಲಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ." ಎನ್ನುತ್ತಾರೆ ಅಮೀರ್ ಖಾನ್.