ಅಮೀರ್ ನಿರ್ಮಾಣದ 'ಜಾನೆ ತೂ..' ಚಿತ್ರದ ಎರಡನೇ ನಾಯಕಿ ಮಂಜರಿ ಫಡ್ನಿಸ್ ಉತ್ತಮ ಪಾತ್ರಗಳಿಗಾಗಿ ಎದುರು ನೋಡುತ್ತಿದ್ದಾರೆ.
ಜಾನೆಯಲ್ಲಿ ಮುಖ್ಯಪಾತ್ರಧಾರಿಗಳಾದ ಇಮ್ರಾನ್ ಖಾನ್ ಮತ್ತು ಜೆನಿಲಿಯಾ ಡಿ'ಸೋಜಾ ಸೇರಿದಂತೆ ಹೊಸ ನಟವರ್ಗವನ್ನು ಹೊಂದಿದ್ದ ಚಿತ್ರವನ್ನು ಒಪ್ಪಿಕೊಳ್ಳಲು ಹಿಂದೆ-ಮುಂದೆ ನೋಡಿದ್ದರು.
'ರೋಕ್ ಸಕೊ ತೊ ರೋಕ್ ಲೊ' ಮತ್ತು 'ಮುಂಬಯಿ ಸಲ್ಸಾ' ಚಿತ್ರಗಳಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದ ಮಂಜರಿ "ಹೌದು, ಪ್ರಾರಂಭದಲ್ಲಿ ಗೊಂದಲವಿತ್ತು. ಆದರೆ, ನಿರ್ದೇಶಕ ಅಬ್ಬಾಸ್ ಟೈರವಾಲ ಕಥೆಯನ್ನು ತಿಳಿಸಿದಾಗ ನನಗೆ ನನ್ನ ಪಾತ್ರವು ತುಂಬಾ ಆಸಕ್ತಿಕರವಾಗಿದ್ದು ನಟನೆಗೆ ವಿಫುಲ ಅವಕಾಶ ಹೊಂದಿರುವುದು ಅರಿವಾಯಿತು. ಆ ಪಾತ್ರ, ಭಾವಗಳ ವಿವಿಧ ಹರವುಗಳನ್ನು ಹೊಂದಿದೆ" ಎಂದು ಹೇಳಿದ್ದಾರೆ.
ಅವರು ಇಡೀ ಚಿತ್ರ ತಂಡ ಪಂಚ್‌ಗಾನಿಯಲ್ಲಿ ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡಿತ್ತು ಮತ್ತು ಚಿತ್ರ ಸೆಟ್ಟೇರುವ ಮೊದಲು ಉತ್ತಮವಾಗಿ ಸಜ್ಜುಗೊಳಿಸಲಾಗಿತ್ತು ಎಂದು ಹೇಳಿದರು
"ನಿಮ್ಮ ಮೊದಲ ಚಿತ್ರ ಒಳ್ಳೆಯ ಅಭಿಪ್ರಾಯ ಮೂಡಿಸದಿದ್ದರೆ, ಯಾರೊಬ್ಬರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ" ಎನ್ನುವ ಮಂಜರಿ ತನ್ನ ಮೊದಲಚಿತ್ರದ ನಂತರ 'ಜಾನೆ ತೂ..' ಮೂಲಕ ಗುರುತಿಸಿಕೊಳ್ಳಲು ಎರಡು ವರ್ಷ ಹೆಣಗಾಡಬೇಕಾಯಿತು. "ಈ ಬಾರಿ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡೆ ಮತ್ತು ವಿವಿಧ ಚಿತ್ರಗಳನ್ನು ವಿಕ್ಷೀಸಿದೆ, ಪುಸ್ತಕಗಳನ್ನು ಓದಿದೆ, ಶಿರ್ನಾಕ್ ಸಂಸ್ಥೆಯಲ್ಲಿ ನೃತ್ಯ ಪರಿಣತಿ ಪಡೆದೆ ಮತ್ತು ಭಾರ ಇಳಿಸಿಕೊಂಡೆ" ಎನ್ನುತ್ತಾ ನಗೆಬೀರುತ್ತಾರೆ ಈ ನಟೀಮಣಿ.
"ನಾನು, ಇತ್ತೀಚೆಗೆ ಸಾಮಾಜಿಕ ಅರಿವು ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಬೆಂಗಾಳಿ ಚಿತ್ರ 'ಫಾಲ್ತು'ವಿನಲ್ಲಿ ನಟಿಸಿದ್ದರೂ ಪ್ರಚಾರದಿಂದ ದೂರ ಉಳಿದಿದ್ದೀನೆ. ಇದಲ್ಲದೆ, ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದೇನೆ ಮತ್ತು ಸದ್ಯದಲ್ಲೇ ತಮಿಳು ಚಿತ್ರವೊಂದರಲ್ಲಿ ದುಡಿಯಲಿದ್ದೇನೆ" ಎಂದು ಹೇಳಿದ್ದಾರೆ.