ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಪ-ರೂಪಕ್ಕೆ ಕರೀನಾಳೊಂದಿಗೆ ಮಾತಾಡುವ ಶಾಹಿದ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ಶಾಹಿದ್ ಕಪೂರ್ ಮಿತಭಾಷಿ ಎಂಬುದು ಜನಜನಿತ. ಕರೀನಾಳೊಂದಿಗಿನ ಮುರಿದು ಬಿದ್ದ ಸುದೀರ್ಘ ಸಮಯದ ಪ್ರಣಯ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ, ಆ ಬಗ್ಗೆ ಬಹುಕಾಲದಿಂದ ತುಟಿಬಿಚ್ಚದ ಶಾಹಿದ್, ತನ್ನ ಮೌನ ಮುರಿಯಲು ಬಯಸುವುದು ವೃತ್ತಿ ಜೀವನದ ಕುರಿತು ಮಾತ್ರ.

ಆರು ತಿಂಗಳು ಮಾಧ್ಯಮಗಳಿಂದ ದೂರ ಉಳಿದ ಶಾಹಿದ್ ಬುಟ್ಟಿಗೆ 'ಜಬ್ ವಿ ಮೆಟ್ 'ಯಶಸ್ಸಿನಿಂದ ಹೆಚ್ಚೇನು ಬೀಳದಿದ್ದರು, ಸದ್ಯಕ್ಕೆ ಶಾಹಿದ್ ಮುಂದೆ ಬಹಳಷ್ಟು ಅವಕಾಶಗಳಿವೆ.

'ಕಿಸ್ಮತ್ ಕೊನೆಕ್ಷನ್'ನಲ್ಲಿ ಅವರ ಪಾತ್ರ ಬಹಳಷ್ಟು ಮಟ್ಟಿಗೆ ನಿಜವಾದ ಶಾಹಿದ್‌ನಂತೆಯೇ ಇದೆ. " ಚಿತ್ರರಂಗದಲ್ಲಿ ನನ್ನ ಹೋರಾಟದ ದಿನಗಳು, ಯಶಸ್ಸಿನ ಅನ್ವೇಷಣೆಯಲ್ಲಿ ನಾವೆಲ್ಲರೂ ಹೇಳುವಂತೆ, ನಾನು ನುಡಿದ ಹಸಿ ಸುಳ್ಳುಗಳು, ಎಲ್ಲವೂ ಚಿತ್ರದ ಪಾತ್ರಕ್ಕೆ ಬಹಳ ಹೋಲಿಕೆಯಾಗುತ್ತದೆ" ಎಂದು ಅವರು ಹೇಳುತ್ತಾರೆ.

ಅವರನ್ನು ವಿದ್ಯಾರೊಂದಿಗಿನ ಸಂಬಂಧದ ಹಾಗು ಅವರಿಬ್ಬರು ನಿಕಟವಾಗಿರುವ ಬಗೆಗಿನ ವದಂತಿಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ, "ಚಿತ್ರೀಕರಣದ ಸಂದರ್ಭದಲ್ಲಿ ವಿದ್ಯಾ ಮತ್ತು ನಾನು ಒಳ್ಳೆಯ ಸ್ನೆಹಿತರಾಗಿದ್ದೇವೆ. ವಿದ್ಯಾ ಒಳ್ಳೆಯ ನಟಿ ಮತ್ತು ಸರಳ ವ್ಯಕ್ತಿಯಾಗಿರುವುದರಿಂದ ಅವರೊಡನೆ ದುಡಿಯುವುದು ಖುಷಿ ನೀಡಿತು. ನಮ್ಮಿಬ್ಬರ ಜೋಡಿ ತೆರೆಯ ಮೇಲೆ ಚೆನ್ನಾಗಿ ಕಾಣಿಸುತ್ತದೆ ಮತ್ತು ಜನ ನಮ್ಮನ್ನು ಇಷ್ಟಪಡುತ್ತಾರೆಂದು ಅಂದುಕೊಳ್ಳುತ್ತೇನೆ" ಎಂದು ಹೇಳಿದರು. ಕರೀನಾ ಬಗ್ಗೆ ಪ್ರಶ್ನಿಸಿದರೆ "ಕರೀನಾ ಮತ್ತು ನಾನು ಅಪರೂಪವಾಗಿ ಮಾತನಾಡುತ್ತೇವೆ. ಇದಕ್ಕಿಂತ ಹೆಚ್ಚು ನಾನು ಈ ಬಗ್ಗೆ ಮಾತನಾಡಲು ಇಚ್ಚಿಸುವುದಿಲ್ಲ" ಎಂದರು.

ಸಾನಿಯಾರ ವಿಂಬಲ್ಡನ್ ಮ್ಯಾಚ್‌ಗಳ ಶಾಹಿದ್ ವೀಕ್ಷಣೆ ಮತ್ತು ಇಬ್ಬರೂ ಪರಸ್ಪರರ ಹತ್ತಿರವಾಗುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿವೆ. ಆದರೆ ಶಾಹಿದ್ ಎಲ್ಲವನ್ನು ಬಿಚ್ಚಿಡುವ ಮೂಡ್‌ನಲ್ಲಿರಲಿಲ್ಲ. ಅವರು ಸಾನಿಯಾರೊಂದಿಗಿನ ಸಂಬಂಧವನ್ನು ಅಲ್ಲಗಳೆಯುತ್ತಿಲ್ಲ ಆದರೆ ಅವರಿಗೆ ತಮ್ಮ ಬದುಕಿನ ಈ ಘಟ್ಟದಲ್ಲಿ ಪ್ರಣಯ ಪ್ರಸಂಗಗಳ ಕುರಿತು ಮಾತನಾಡುವ ಮನಸ್ಸಿರಲಿಲ್ಲ.

"ನಾನೊಬ್ಬ ಸಹಜ 27ರ ವಯಸ್ಸಿನ ವ್ಯಕ್ತಿ. ಪ್ರಾಮಾಣಿಕವಾಗಿ, ನನ್ನ ಬದುಕಿನಲ್ಲಿ ಯಾವುದೇ ರೋಮಾನ್ಸ್ ನಡೆಯುತ್ತಿಲ್ಲ. ನಾನು ವಿವರಗಳನ್ನು ಮುಚ್ಚಿಡಲು ಬಯಸುವುದಿಲ್ಲ ಅದರೆ ಆ ಕುರಿತು ಮಾತನಾಡಲೂ ಬಯಸುವುದಿಲ್ಲ. ನನ್ನ ಪ್ರಕಾರ ಬದುಕಿನಲ್ಲಿ ಕೆಲವೊಂದು ವಿಷಯಗಳು ವೈಯಕ್ತಿಕವಾಗಿರುತ್ತವೆ ಮತ್ತು ನಾನು ನನ್ನ ಖಾಸಗಿ ಬದುಕಿನ ಮಾಹಿತಿಗಳನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತವಾಗಿರಿಸಲು ಬಯಸುತ್ತೇನೆ. ಕೊನೆಗೆ, ಜನರಿಗೇ ಸತ್ಯ ಏನೆಂಬುದು ತಿಳಿಯುತ್ತದೆ." ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾಹಿದ್ ಕಪೂರ್, ಕರಿನಾಕಪೂರ್, ಪ್ರೀತಿ