ವದಂತಿಗಳೇನೆಂದರೆ ಬಾಲಿವುಡ್ ಕುವರಿ ಕತ್ರಿನಾ ಬುಧವಾರ ತನ್ನ 24ನೇ ಹುಟ್ಟುಹಬ್ಬವನ್ನು ತನ್ನ ಗೆಳೆಯರ ಬಳಗ ಮತ್ತು ಪರಿವಾರದೊಂದಿಗೆ ಬಾಂದ್ರದ ಒಲಿವ್ಸ್‌ನಲ್ಲಿ ಆಚರಿಸುತ್ತಿದ್ದರೆ ಇತ್ತ ಕಡೆ ಸಲ್ಲು ತನ್ನ ಮನದನ್ನೆಯ ಹುಟ್ಟು ಹಬ್ಬ ಆಚರಣೆಗಾಗಿ ಪಾನ್‌ವೆಲ್‌ನ ತಮ್ಮ ಪಾರ್ಮ್‌ಹೌಸ್‌ನಲ್ಲಿ ಕಾಯುತ್ತಿದ್ದರಂತೆ.
ಮೂಲಗಳ ಪ್ರಕಾರ ಸಲ್ಮಾನ್ ಮತ್ತವರ ಕುಟುಂಬ ಪಾನ್‌ವೆಲ್‌ನ ಮನೆಯಲ್ಲಿ, ಬರ್ತ್‌ಡೇ ಗರ್ಲ್ ಕತ್ರಿನಾಳ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ಮುಂಬಯಿಯಲ್ಲಿ ಚಿತ್ರೀಕರಣ ನಿರತಳಾಗಿದ್ದ ಕತ್ರಿನಾಗೆ ಅಲ್ಲಿಂದ ಪಾನ್‌ವೆಲ್‌ಗೆ ಪ್ರಯಾಣಿಸುವುದು ಅಸಾಧ್ಯವಾಗಿತ್ತು. ತನ್ನೊಡನೆ ಇರಲು ಕತ್ರಿನಾ ಒಂದು ದಿನದ ಮಟ್ಟಿಗೆ ಶೂಟಿಂಗ್‌ನಿಂದ ಬಿಡುವು ಮಾಡಿಕೊಳ್ಳದಿದ್ದುದು ಸಲ್ಲುಗೆ ಬೋ ಬೇಜಾರಾಗಿತ್ತು. ಈ ವಿಷ್ಯಾ ಕೈಫ್- ಸಲ್ಲು ನಡುವೆ ಕಲಹಕ್ಕೆ ಎಡೆಮಾಡಿತು ಎಂಬುದು ವರದಿ.
IFM
ಅದಲ್ಲದೆ, ಕತ್ರಿನಾಳ ತಾಯಿ ಮತ್ತು ಅಕ್ಕ ಅವಳೊಂದಿಗಿರಲು ಲಂಡನ್‌ನಿಂದ ಮುಂಬಯಿಗೆ ಬಂದಿದ್ದುದೂ ಕತ್ರಿನಾ ಮುಂಬಯಿಯಲ್ಲಿ ಉಳಿದುಕೊಳ್ಳಲು ಒಂದು ಕಾರಣ. ಇನ್ನೇನು, ಕತ್ರಿನಾ ಪ್ರಿಯಕರನ ಅನುಪಸ್ಥಿತಿಯಲ್ಲಿ ತನ್ನ ಹುಟ್ಟುಹಬ್ಬ ಆಚರಿಸಕೊಳ್ಳಬೇಕು ಎನ್ನುವಷ್ಟರಲ್ಲಿ ಸಲ್ಲು ತನ್ನ ಇಡೀ ಕುಟುಂಬದೊಂದಿಗೆ ತನ್ನ ಮನದರಸಿಯ, ಮನ ಪುಳಕಗೊಳಿಸಲು ಮುಂಬಯಲ್ಲಿ ಹಾಜರ್!!
ಅಲ್ವೆ ಮತ್ತೆ. ಎಲ್ಲರನ್ನೂ ತನ್ನ ತಾಳಕ್ಕೆ ತಕ್ಕಂತೆ ಹೇಗೆ ಕುಣಿಸಬೇಕೆಂದು ಕತ್ರಿನಾಗೆ ಚೆನ್ನಾಗಿ ಗೊತ್ತು !