ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದೀಪಿಕಾ, ಕಿಮ್ ಜೊತೆ ಪ್ರೇಮಾಯಣ: ಒಪ್ಪಿಕೊಂಡ ಯುವಿ
ಸುದ್ದಿ/ಗಾಸಿಪ್
Feedback Print Bookmark and Share
 
PTIPTI
ಕ್ರಿಕೆಟ್ ಜಗತ್ತಿನ ಅರಾಧ್ಯ ದೈವ ಯುವರಾಜ್ ಸಿಂಗ್ ಮತ್ತು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಡುವೆ ರಸವತ್ತಾದ ಪ್ರಣಯ ಪ್ರಸಂಗ ನಡೆಯುತ್ತಿದೆ ಎಂದು ಗುಸುಗುಸು ಅನ್ನುತ್ತಿದ್ದವರಿಗೆ ಇಲ್ಲೊಂದು ಹೊಸ ಸುದ್ದಿ. ಎರಡು ತಿಂಗಳಿನಿಂದೀಚೆ ಜೊತೆಗೂಡಿದ್ದ ಈ ಜೋಡಿಯ ಅನುರಾಗ ಬಂಧ ಕೊನೆಗೊಂಡಿದೆ.

ಮೌನದ ಮೊರೆ ಹೊಕ್ಕು ಕೊನೆಯಿಲ್ಲದ ವದಂತಿಗಳ ದಾರಿಯಲ್ಲಿ ಸಾಗುತ್ತಿದ್ದ ಕ್ರಿಕೆಟಿಗ ಈಗ ತನ್ನ ಮೌನಮುರಿದು ತಮ್ಮ ಸಂಬಂಧ ಕಡಿದ ಬಗ್ಗೆ ಪೀಪಲ್ ಮ್ಯಾಗಜಿನ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ದೀಪಿಕಾ ಮತ್ತು ಯುವಿ ಪರಸ್ಪರರ ಬಗ್ಗೆ ಆಸಕ್ತಿ ವಹಿಸಿದ್ದು, ಸನಿಹಗೊಂಡದ್ದು ಮತ್ತು ಜೊತೆಯಾಗಿ ಹೊರಗಡೆ ಸುತ್ತಾಡಿದ ಬಗೆಗಿನ ವದಂತಿಗಳು ನಿಜ, ಅದರೆ ಇವರಿಬ್ಬರು ದೂರಾಗುವುದಕ್ಕೆ ರಣ್‌ಬೀರ್ ಕಪೂರ್ ಕಾರಣ ಎನ್ನುವುದು ಅಪ್ಪಟ ಸುಳ್ಳು.

ಇಬ್ಬರ ಆದ್ಯತೆಗಳು ಒಬ್ಬರಿಗೊಬ್ಬರು ನೀಡಬಹುದಾದ ಸಮಯದ ಅಭಾವದಿಂದಾಗಿ ಹೊಂದಾಣಿಕೆ ಆಗುತ್ತಿರಲಿಲ್ಲವಾದ್ದರಿಂದ ಅವರಿಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು.

ತಾವಿಬ್ಬರು ಟಿ-20 ವರ್ಲ್ಡ್ ಕಪ್ ನಂತರ ಭೇಟಿಯಾಗಿದ್ದಾಗಿ ಸಂದರ್ಶನವೊಂದರಲ್ಲಿ ಯುವರಾಜ್ ತಿಳಿಸಿದ್ದಾರೆ.

ಕೆಲವು ದಿನ ಜೊತೆಯಾಗಿ ತಿರುಗಾಡಿದ ನಂತರ ತಮ್ಮಿಬ್ಬರ ಜೋಡಿ ಯಶಸ್ವಿಯಾಗುತ್ತಿದೆ ಎಂದು ಇಬ್ಬರಿಗೂ ಅನಿಸಿತು ಆದರೆ, ವಿಭಿನ್ನ ವೃತ್ತಿಗಳಿಂದ ಬಂದಿರುವುದರಿಂದ ಜೊತೆಯಾಗಿ ಕಳೆಯಬಹುದಾದ ಸಮಯದ ಅಭಾವವಿತ್ತು ಮತ್ತು ಅಷ್ಟರಲ್ಲೆ ಯುವಿ ಪಾಕ್ ವಿರುದ್ದದ ಸರಣಿ ಮತ್ತು ಇತರ ಪ್ರವಾಸಗಳಲ್ಲಿ ವ್ಯಸ್ತರಾದರು, ಇತ್ತಕಡೆ ದೀಪಿಕಾ ತನ್ನ ಮೊದಲ ಚಿತ್ರ 'ಓಂ ಶಾಂತಿ ಓಂ' ಪ್ರಚಾರದಲ್ಲಿ ನಿರತರಾದರು.

"ಈ ಸಂಬಂಧ ದೀರ್ಘಕಾಲಿಕವಾಗಿಸುವ ಬಗ್ಗೆ ಪರಸ್ಪರರೊಡನೆ ಹೆಚ್ಚಿನ ಸಮಯ ಕಳೆಯುವುದು ಸಾಧ್ಯವಾಗಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಅವಳು ಮುಂದುವರಿದಳು, ನಾನು ಕೂಡ. ಹಿಂದೆ ಅವಳು ನನ್ನೊಂದಿಗೆ ಇದ್ದಳು, ಈಗ ಬೇರೊಬ್ಬರೊಡನೆ ಇದ್ದಾಳೆ. ನನ್ನ ಊಹೆಯಂತೆ ಇದು ಅವಳ ವೈಯಕ್ತಿಕ ಆಯ್ಕೆ. ಒಬ್ಬರು ಒಂದು ಸಂಬಂಧದಿಂದ ಹೊರಬರಲು ಬಯಸಿದರೆ ಅದರಲ್ಲಿ ಇನ್ನೊಬ್ಬ ವ್ಯಕ್ತಿ ಮಾಡಬಹುದಾದದ್ದು ಏನು ಇಲ್ಲ. ನಾನು ವಾಸ್ತವತೆಯನ್ನು ಬಿಚ್ಚಿಡುತ್ತಿದ್ದೇನೆಯೇ ಹೊರತು ಯಾರನ್ನು ದೂಷಿಸುತ್ತಿಲ್ಲ" ಎಂದು ಯುವರಾಜ್ ಹೇಳಿದ್ದಾರೆ.

ಅವರನ್ನು ಸ್ತ್ರಿ ಲೋಲ ಎಂದು ಬಿಂಬಿಸುವ ವದಂತಿಗಳನ್ನು ತಳ್ಳಿ ಹಾಕುತ್ತಾ "ಕೆಲವು ಕಾರಣಗಳಿಂದ ಜನ ನಾನು ಹುಡುಗಿಯರೊಂದಿಗೆ ಕೇವಲ ಮಜಾ ಮಾಡಲು ಇದ್ದೇನೆ ಅಂದುಕೊಂಡಿದ್ದಾರೆ. ಆದರೆ ನಾನು ಒಂದು ಸಂಬಂಧದಲ್ಲಿ ತೊಡಗಿಕೊಳ್ಳಬೇಕೆಂದರೆ ನಾನು ಅವರನ್ನು ನಿಜವಾಗಿಯೂ ಪ್ರೀತಿಸಬೇಕು. ನಾನು ಇತರರನ್ನು ಮೂರ್ಖರನ್ನಾಗಿಸುತ್ತಾ ತಿರುಗುವುದಿಲ್ಲ. ದೀಪಿಕಾಳಿಗಿಂತ ಮೊದಲು ನಾನು ಕಿಮ್(ಶರ್ಮ)ಳನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೆ ಮತ್ತು ಇದು ಬದ್ಧತೆಯಿಂದ ಕೂಡಿದ ನಿಜವಾದ ಪ್ರೀತಿಯಾಗಿತ್ತು" ಎಂದು ಯುವರಾಜ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುವರಾಜ್ ಸಿಂಗ್, ದೀಪಿಕಾ ಪಡುಕೋಣೆ, ಕಿಮ್ ಶರ್ಮ, ಪ್ರಣಯ