ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶಾರುಖ್-ಸಲ್ಲು ನಂತರ ಶಾಹಿದ್-ಸಂಜಯ್ ?
ಸುದ್ದಿ/ಗಾಸಿಪ್
Feedback Print Bookmark and Share
 
IFM
ಖಾನ್ ದ್ವಯರ ಹೊಡೆದಾಟದ ಸುದ್ದಿ ಬಿಸಿ ಆರುತ್ತಿರುವಂತೆಯೇ ಮನ್ನೊಂದು ಸಮರದ ಕಾವು ಏರುತ್ತಿರುವಂತೆ ಕಂಡುಬರುತ್ತಿದೆ. ಈ ಬಾರಿ ಸರದಿ ಸಂಜಯ್ ದತ್ ಮತ್ತು ಶಾಹೀದ್ ಕಪೂರ್‌ರದು.

ಮುನ್ನಭಾಯಿ, ಬಾಲಿವುಡ್‌ನ ಚಾಕಲೇಟ್ ಬಾಯ್‌ನೊಂದಿಗೆ ನಟಿಸುವುದಕ್ಕೆ ನಿರಾಕರಿಸುವುದರ ಮೂಲಕ ಇವರಿಬ್ಬರ ನಡುವೆ ನಡೆಯುತ್ತಿದ್ದ ಶೀತಲ ಸಮರ ತೆರೆ ಸರಿದು ಹೊರಬಂದಿದೆ.

ಪ್ರಸ್ತುತ ಶಾಹೀದ್‌ ಸತತ ಮೂರು ಹಿಟ್ ಚಿತ್ರಗಳೊಂದಿಗೆ ಬಾಲಿವುಡ್ ಚಿತ್ರ ಪ್ರೇಮಿಗಳ ಹೃದಯ ಆಳುತ್ತಿದ್ದರೂ, ಅವನ ಜೊತೆ ಪರದೆ ಹಂಚಿಕೊಳ್ಳಲು ಸಂಜು ಬಾಬನಿಗೆ ಮನಸ್ಸಿಲ್ಲ.

ಸಂಜಯ್‌ನ ಈ ದವಲತ್ತಿನಿಂದ ಶಾಹಿದ್, ಅಸ್ತಿ ವಿನಾಯಕ್ ಅವರ ಕಿಡ್ನಾಪ್ ಚಿತ್ರದಿಂದ ಡ್ರಾಪ್ ಆಗಿದ್ದಾರೆ. ಅಮೀರ್ ಖಾನ್‌ರ ಸೋದರಳಿಯ ಇಮ್ರಾನ್ ಖಾನ್ ಶಾಹಿದ್ ಶೂಗೆ ಕಾಲಿಟ್ಟಿದ್ದಾರೆ.

ಈ ವ್ಯಥೆಯ ಕತೆ ಆರಂಭವಾಗಿದ್ದು, ಶಾಹಿದ್ ಮತ್ತು ಸಂಜಯ್ ಜೊತೆಯಾಗಿ ನಟಿಸಿದ 'ವಾಹ್ ಕ್ಯಾ ಲೈಫ್ ಹೈ!' ಚಿತ್ರದ ಸಂದರ್ಭದಲ್ಲಿ. ಚಿತ್ರೀಕರಣದ ನಂತರ ಈ ಇಬ್ಬರು ನಟ ಮಹಾಶಯರ ನಡುವಣ ಸಂಬಂಧ ಹಳಸುತ್ತಾ ಹೋಯಿತು, ಆ ನಂತರ ಶಾಹಿದ್, ಸಂಜಯ್‌ರ ಬಗ್ಗೆ ನಿರ್ಲಿಪ್ತ ಧೋರಣೆ ತೋರಲಾರಂಬಿಸಿದ.

ಶಾಹಿದ್‌ರ ಗೆಳೆಯರು ಹೇಳುವಂತೆ ಅವರಿಗೆ ಸಂಜಯ್ ದತ್ ಬಗ್ಗೆ ಗೌರವದ ಭಾವನೆಯಿತ್ತು ಆದರೆ ಅದನ್ನು ಅವರಿಗೆ ತಿಳಿಸಲು ಶಾಹಿದ್ ಸಂಕೋಚಪಟ್ಟಿದ್ದರಿಂದ ಅದು ಸಾಧ್ಯವಾಗಿರಲಿಲ್ಲ, ಆದ್ದರಿಂದಲೇ ಶಾಹಿದ್ ಅವರೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಂಡಿರಲಿಲ್ಲ. ಆದರೆ ಶಾಹಿದ್‌ರ ಈ ನಾಚಿಕೆ ಮನೋಭಾವವನ್ನು ಕುತಂತ್ರವೆಂದು ತಪ್ಪಾಗಿ ಅರ್ಥೈಸಿದ ಸಂಜಯ್ ಅವರೊಂದಿಗೆ ಮತ್ತೆ ನಟಿಸದಿರಲು ನಿರ್ಧರಿಸಿದರು.

ಸಧ್ಯಕ್ಕೆ, ಇಮ್ರಾನ್‌ಗೆ ಸಂಜಯ್ ಜೊತೆ ಮಾತನಾಡಲು ಸಂಕೋಚವಾಗದಿದ್ದರೆ ಸಾಕು, ಇಲ್ಲವೆಂದರೆ ಮುಂದೇನಾಗಬಹುದು ಎಂಬುದು ನಿಮಗೆ ಗೊತ್ತೇ ಇದೆ....
IFM


ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾಹೀದ್ ಕಪೂರ್‌, ಸಂಜಯ್ ದತ್