ಸಲ್ಮಾನ್ ಖಾನ್ರ ಪ್ರೇಮದ ರೈಲು ಮತ್ತೆ ಹಳಿಗೆ ಬಂದಂತೆ ಕಾಣಿಸುತ್ತಿದೆ. ಕತ್ರಿನಾಳ ಬರ್ತಡೇ ಪಾರ್ಟಿಯಂದು ಸಲ್ಲು, ಶಾರುಖ್ರ ಜಟಾಪಟಿ (ಕು)ಖ್ಯಾತಿ ಪಡೆದಿದ್ದು, ಆ ನಂತರ ಶಾರುಖ್ ತನ್ನ ಟೆಂಪ್ಟೆಶನ್ ಕಾರ್ಯಕ್ರಮದಿಂದ ಕತ್ರಿನಾ ಕೈಫ್ಳಿಗೆ ಕೊಕ್ ಕೊಟ್ಟಿದ್ದು ಈ ಈ ಪ್ರಣಯಿಗಳ ನಡುವೆ ಬಿರುಕು ಮೂಡಿಸಿತ್ತು ಎಂಬ ಸುದ್ದಿ ದಟ್ಟಗೊಂಡಿತ್ತು, ಆದರೆ ಈ ವದಂತಿಗಳಿಗೆ ವ್ಯತಿರಿಕ್ತ ಎಂಬಂತೆ ಈ ಇಬ್ಬರು ಮತ್ತೆ ಒಂದಾಗಿ ಮುಂಬಯಿಯ ಹೋಟೆಲ್ ಒಂದರಲ್ಲಿ ಡಿನ್ನರ್ ಸ್ವೀಕರಿಸಿದುದು ಕಂಡರೆ, ಇಬ್ಬರೂ ಆಗಿಹೋದ ಕಹಿ ನೆನಪನ್ನು ಮರೆಯುವ ನಿರ್ಣಯಕ್ಕೆ ಬಂದಂತಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ "ಸಲ್ಮಾನ್ ನಂತರ ಕತ್ರಿನಾ ಹೋಟೆಲ್ಗೆ ಬಂದರು. ಇಬ್ಬರು ಪರಸ್ಪರ ಅಪ್ಪಿಕೊಂಡ ನಂತರ ಒಂದು ಗಂಟೆಗಳ ಕಾಲ ಜೊತೆಯಾಗಿ ಕುಳಿತು ಡಿನ್ನರ್ ಸ್ವೀಕರಿಸಿದರು. ಅವರಿಬ್ಬರು ಸಲ್ಲು ಕಾರ್ನಲ್ಲಿ ಜೊತೆಯಾಗಿ ತೆರಳಿದರು ಕತ್ರಿನಾ ಕಾರ್ ಹಿಂಬಾಲಿಸಿತು"
ಅಂದರೆ ಎಲ್ಲವೂ ಸರಿಯಾಗಿದೆ, ಸರಿಯಾಗಿರುವುದೆಲ್ಲ ಶುಭಾಂತ್ಯ ಕಾಣುತ್ತದೆ !