ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶಾರುಖ್‌ರೊಂದಿಗೆ ಸ್ನೇಹವಿಲ್ಲ: ಸಲ್ಲು
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್‌ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮೊದಲ ಬಾರಿಗೆ ತಮ್ಮ ಮತ್ತು ಶಾರುಖ್ ಖಾನ್ ನಡುವಿನ ಕಲಹದ ಬಗ್ಗೆ ಮಾತಿಗಿಳಿದಿದ್ದಾರೆ. ಎಸ್ಆರ್‌ಕೆ ತಮ್ಮ ಸ್ನೇಹಿತರಾಗಿ ಉಳಿದಿಲ್ಲ, ನಾವಿಬ್ಬರು ವಿಭಿನ್ನ ವ್ಯಕ್ತಿಗಳು ಎಂದು ಸಲ್ಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ "ಪಾರ್ಟಿಯಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ನಾನೇನು ಹೇಳಲು ಬಯಸುವುದಿಲ್ಲ ಆದರೆ ನಮ್ಮಿಬ್ಬರ ನಡುವೆ ಸಮಸ್ಯೆ ಉದ್ಭವಿಸಿತ್ತು ಎಂಬುದನ್ನು ತಿರಸ್ಕರಿಸುವುದಿಲ್ಲ.

ನಮ್ಮ ನಡುವೆ ಬಹಳ ಸಮಯದಿಂದ ವೈರತ್ವ ಹೊಗೆಯಾಡುತ್ತಿತ್ತು, ಇದು ಮೂರನೇ ಬಾರಿಗೆ ನಾವು ಜಗಳವಾಡಿರುವುದು. ನಾವು ಸ್ನೇಹಿತರಾಗಲು ಪ್ರಯತ್ನಿಸಿದ್ದೆವು, ಆದರೆ ಇದು ಸಾಧ್ಯವೆಂದು ಅನಿಸುತ್ತಿಲ್ಲ. ನಾವು ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು" ಎಂದು ಸಲ್ಮಾನ್ ಹೇಳಿದ್ದಾರೆ.

ಕಿಂಗ್ ಖಾನ್‌ರೊಂದಿಗಿನ ವಿವಾದವನ್ನು ಬಗೆಹರಿಸಿಕೊಳ್ಳಲು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ, "ಇಲ್ಲ ನಾನೇಕೆ ಪ್ರಯತ್ನಿಸಬೇಕು ?. ನಾವು ಬೇರೆಯಾದ ವ್ಯಕ್ತಿಗಳು. ಅವರು ದೊಡ್ಡ ವ್ಯಕ್ತಿಯಾಗಿರಬಹುದು ಆದರೆ ಅವರ ಆದರ್ಶ, ಉದ್ದೇಶಗಳು ನನ್ನ ಧ್ಯೇಯೊದ್ದೇಶಗಳಿಗಿಂತ ಭಿನ್ನವಾಗಿದೆ. ನಾನು ಹೊಂದಾಣಿಕೆ ಮಾಡಿಕೊಳ್ಳಲಾಗದ ವ್ಯಕ್ತಿಯೊಂದಿಗೆ ಸ್ನೇಹ ಮುಂದುವರಿಸಲು ಬಯಸುವುದಿಲ್ಲ.

ನಾನು ಎದುರುಗಡೆ ಒಳ್ಳೆಯ ಸ್ನೇಹಿತನಂತೆ ಫೋಸು ಕೊಡುತ್ತಾ ಹಿಂದಿನಿಂದ ಜರೆಯುವ ಮನೋಭಾವದ ವ್ಯಕ್ತಿಯಲ್ಲ. ಇದು ವಿಷಾದಕರ ಆದರೆ ಜೀವನದಲ್ಲಿ ಹೆಚ್ಚಿನ ಜನರು ಹೀಗೇ ಇರುತ್ತಾರೆ. ನಾವಿಬ್ಬರು ಮತ್ತೆ ಸ್ನೇಹಿತರಾಗಬಹುದೆಂದು ನನಗೆ ಅನಿಸುತ್ತಿಲ್ಲ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಇದರೊಂದಿಗೆ ಬಾಲಿವುಡ್ ಜಗತ್ತಿನಲ್ಲಿ ಇನ್ನೊಂದು ಸ್ನೇಹ ಬಿರುಕಿನತ್ತ ಸಾಗಿರುವುದು ಸ್ಪಷ್ಟವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಶಾರುಖ್ ಖಾನ್, ಬಾಲಿವುಡ್‌