ಯುನೆಸ್ಕೋದ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯು ಹೆಸರಾಂತ ನಾಟಕಕಾರ, ನಟ ಗಿರೀಶ್ ಕಾರ್ನಾಡ್ ಅವರನ್ನು ವಿಶ್ವ ರಂಗಭೂಮಿ ರಾಯಭಾರಿಯಾಗಿ ನೇಮಿಸಿದೆ.
ಬ್ರಿಟಿಷ್ ರಂಗಭೂಮಿ ಮತ್ತು ಚಿತ್ರ ನಿರ್ದೇಶಕ ಪೀಟರ್ ಬ್ರೂಕ್, ಇಟಲಿಯ ನಾಟಕಕಾರ ಡೇರಿಯೋ ಫೋ, ಫ್ರೆಂಚ್ ರಂಗಭೂಮಿ ದಂತಕಥೆ ಖ್ಯಾತಿಯ ಆರಿಯೇನ್ ನೌಚ್‌ಕಿನಿ ಮತ್ತು ಜರ್ಮನಿಯ ಕೋರಿಯೋಗ್ರಾಫರ್ ಪೀನಾ ಬಾಶ್ ಸೇರಿದಂತೆ ಸುಮಾರು 12 ಮಂದಿಗೆ ಈ ಗೌರವ ನೀಡಲಾಗಿದೆ.
70ರ ಹರೆಯದ ಕಾರ್ನಾಡ್ ಸಮಕಾಲೀನ ಭಾರತದ ಅತ್ಯಂತ ಶ್ರೇಷ್ಠ ನಾಟಕಕಾರರಲ್ಲೊಬ್ಬರು ಎಂದು ಗುರುತಿಸಲಾಗಿದ್ದು, ಕಳೆದ 40 ವರ್ಷಗಳಲ್ಲಿ ಅವರ ನಾಟಕಗಳು ವಿಭಿನ್ನ ಭಾಷೆಗಳಿಗೆ ತರ್ಜುಮೆಗೊಂಡಿವೆ ಮತ್ತು ಹಲವು ಭಾಷೆಗಳಲ್ಲಿ ನಿರ್ಮಾಣವಾಗಿವೆ.
ಭಾರತ ಸರಕಾರವು ಕಾರ್ನಾಡ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಸಂಗೀತ ನಾಟಕ ಅಕಾಡೆಮಿ ಗೌರವ ನೀಡಿ ಪುರಸ್ಕರಿಸಿದೆ.