ಸಲ್ಮಾನ್-ಅಮಿತಾಭ್‌ರ 'ಗಾಡ್ ತೂಸ್ಸಿ..' ಗೆ ಯುಎಇಯಲ್ಲಿ ನಿಷೇಧ
ದುಬೈ, ಮಂಗಳವಾರ, 19 ಆಗಸ್ಟ್ 2008( 15:27 IST )
IFM
ಸಲ್ಮಾನ್ ಖಾನ್‌ರ 'ಗಾಡ್ ತೂಸ್ಸಿ ಗ್ರೇಟ್ ಹೊ' ಚಿತ್ರ ಇಸ್ಲಾಮಿಕ್ ತತ್ವಬೋಧನೆಗಳನ್ನು ಉಲ್ಲಂಘಿಸಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಯುಎಇಯ ಆಧಿಕಾರಿಗಳು ಚಿತ್ರವನ್ನು ಗಲ್ಫ್‌ನ ಚಿತ್ರಮಂದಿರಗಳಿಂದ ನಿಷೇಧಿಸಿದ್ದಾರೆ.
ವೀಕ್ಷಕರಿಂದ ಬಹಳಷ್ಟು ಸಂಖ್ಯೆಯ ದೂರಗಳನ್ನು ಸ್ವೀಕರಿಸಿದ ನಂತರ ಭಾರತ ಮತ್ತು ಯುಎಇಯಲ್ಲಿ ಶುಕ್ರವಾರ ಬಿಡುಗಡೆಯಾದ ಚಿತ್ರಕ್ಕೆ ಗಲ್ಫ್‌ನ ರಾಷ್ಟ್ರೀಯ ಮಾಧ್ಯಮ ಮಂಡಳಿ ಈ ತಡೆ ವಿಧಿಸಿದೆ.
ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಅಮಿತಾಭ್ ಬಚ್ಚನ್ ಸಹ ತಾರಗಣದಲ್ಲಿದ್ದಾರೆ. ಇದು 2003ರ ಹಾಲಿವುಡ್ ಚಿತ್ರ 'ಬ್ರೂಸ್ ಅಲ್‌ಮೈಟಿ' ಚಿತ್ರದ ರಿಮೇಕ್ ಎಂದು ತಿಳಿಯಲಾಗಿದೆ
ಚಿತ್ರದಲ್ಲಿ ಬಚ್ಚನ್ ದೇವರ(ಗಾಡ್) ಪಾತ್ರವನ್ನು ವಹಿಸಿದ್ದಾರೆ ಮತ್ತು ಇವರು ಚಿತ್ರದಲ್ಲಿ ಅರುಣ್ ಪ್ರಜಾಪತಿ ಪಾತ್ರದಲ್ಲಿರುವ ಸಲ್ಮಾನ್‌ರನ್ನು ಭೇಟಿಯಾದಾಗ ಸಲ್ಮಾನ್ ತಮ್ಮೆಲ್ಲ ಸಮಸ್ಯೆಗಳಿಗೆ ದೇವರನ್ನು ದೂಷಿಸುತ್ತಾರೆ.
"ತಾವು ಬಚ್ಚನ್ ದೇವರ ಪಾತ್ರ ವಹಿಸಿದ್ದನ್ನು ಕಂಡು ಆಘಾತಕ್ಕೊಳಗಾದೆವು ಎಂದು ಚಿತ್ರ ವೀಕ್ಷಸಿದವರು ಆಧಿಕಾರಿಗಳಿಗೆ ತಿಳಿಸಿದ್ದಾರೆ" ಎಂದು ಗಲ್ಫ್ ಸುದ್ದಿ ಮಾಧ್ಯಮ ವರದಿ ಮಾಡಿದೆ.