ಆದಿತಿ ಗೋವಿತ್ರಿಕರ್ರ ಮುಂದಿನ ಚಿತ್ರ 'ವಾಟ್ಸ್ ಯುವರ್ ರಾಶಿ?'ಯಲ್ಲಿ ಬಾಲಿವುಡ್ ಬ್ಯೂಟಿ ಕ್ವೀನ್ ಪ್ರಿಯಾಂಕ ಚೋಪ್ರಾ ಒಂದಲ್ಲ, ಎರಡಲ್ಲ ಹನ್ನೆರಡು ಪಾತ್ರಗಳಲ್ಲಿ ನಟಿಸಲಿದ್ದಾರೆ.
ಈ ಚಿತ್ರ ಜ್ಯೋತಿಷ್ಯ ಶಾಸ್ತ್ರದ ಮೇಲೆ ಆಧರಿತವಾಗಿದೆ ಎಂದು ಹೇಳಲಾಗಿದೆ ಮತ್ತು ಪ್ರಿಯಾಂಕ 12 ವಿಧದ ರಾಶಿಗಳನ್ನು ಬಿಂಬಿಸುತ್ತಾ 12 ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಪ್ರತಿಯೊಂದು ರಾಶಿಯ ಗುಣಲಕ್ಷಣವನ್ನು ತಮ್ಮ ಹನ್ನೆರಡು ಪಾತ್ರಗಳಲ್ಲಿ ತೋರ್ಪಡಿಸಲಿದ್ದಾರೆ.
ತಮ್ಮ ಬಹು ನಿರೀಕ್ಷೆಯ ಮೊದಲ ಚಿತ್ರ 'ಲವ್ಸ್ಟೋರಿ 2050' ತೋಪೆದ್ದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಪ್ರಿಯಾಂಕಳಾ ಹಳೆಯ ಪ್ರಿಯಕರ(?) ಹರ್ಮಾನ್ ಬೆವಜಾ ಈ ಚಿತ್ರದಲ್ಲೂ ಪಿಗ್ಗಿ ಚಾಪ್ಸ್ಗೆ ಜೊತೆ ನೀಡಲಿದ್ದಾನೆ.
ಇದು ಅಮೆರಿಕ ಮೂಲದ ಗುಜರಾತಿ ಲೇಖಕಿ ಮಧು ರೈ ಅವರ 'ಕಿಂಬಲ್ ರೆವೆನ್ಸ್ವುಡ್' ಎಂಬ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಹಾಸ್ಯಮಿಶ್ರಿತ ಪ್ರಣಯ ಕಥೆ ಹೊಂದಿದೆ. ಲಾಗನ್ ಮತ್ತು ಜೋಧಾ ಅಕ್ಬರ್ಗಳಂತಹ ಪುರಾಣಪ್ರಸಿದ್ಧ ಚಿತ್ರಗಳನ್ನು ನೀಡಿರುವ ಆದಿತಿ ಗೋವಿತ್ರಿಕರ್ ಮೊದಲ ಬಾರಿಗೆ ಹಾಸ್ಯಮಿಶ್ರಿತ ಪ್ರೇಮ ಕತೆಯನ್ನು ನಿರ್ಮಿಸಲಿದ್ದಾರೆ.