ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಹೊಟ್ಟೆ ಹುರಿಗಟ್ಟಿಸುವ ಸ್ಪರ್ಧೆ, ಈ ಬಾರಿ ಅಮೀರ್ ಸರದಿ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಶರ್ಟ್ ಕಳಚುವುದರಲ್ಲಿ ಸಲ್ಮಾನ್ ಖಾನ್ ನಿಷ್ಣಾತ, ಶಾರುಖ್ ಖಾನ್ ಕೂಡ ಅಭಿಮಾನಿ ಬಳಗದ ನಿದ್ದೆ ಕೆಡಿಸಿದ್ದಾಗಿದೆ, ಈ ಬಾರಿಯ ಸರದಿ ಬಾಲಿವುಡ್‌ನ ಮಿ. ಪರ್‌ಫೆಕ್ಷನಿಸ್ಟ್ ಅಮೀರ್ ಖಾನ್‌ರದು.

ತಮ್ಮ ಮುಂಬರುವ ಚಿತ್ರ ಘಜ್ನಿಯಲ್ಲಿ ಅಮೀರ್ ಶರ್ಟ್ ಕಳಚಿ ಹೊಟ್ಟೆಯ ಆರು ಹುರಿಗಳನ್ನು ಪ್ರದರ್ಶಿಸಲಿದ್ದಾರೆ.

ಅಮೀರ್ ತಿಂಗಳುಗಟ್ಟಲೇ ಬೆವರು ಸುರಿಸಿ, ಮೈಲುಗಟ್ಟಲೇ ಓಟ ನಡೆಸಿ ಘಜ್ನಿಯಲ್ಲಿ ಶಾರುಖ್ ಆಗಲು ತಯಾರಿ ಮಾಡಿದ್ದಾರಂತೆ. ಘಜ್ನಿ ತಮಿಳಿನ ಸೂಪರ್ ಹಿಟ್ ಚಿತ್ರವೊಂದರ ರಿಮೇಕ್.

ಇಲ್ಲಿ ಶರ್ಟ್ ಕಳುಚುವುದರ ಮೇಲಷ್ಟೇ ಅಮೀರ್ ಗಮನಹರಿಸಿದ್ದಲ್ಲ, ಚಿತ್ರ ವಿವಿಧ ವಿಷಯಗಳಲ್ಲಿ ತಮ್ಮ ಪರಿಣತ ಸಲಹೆ, ಸೂಚನೆಗಳನ್ನು ಸಹ ನೀಡಿದ್ದಾರಂತೆ. ಇದಲ್ಲದೆ ಚಿತ್ರದಲ್ಲಿ ಅಮೀರ್ ದವಡೆ ಮುರಿಯುವಂತಹ ಸ್ಟಂಟ್‌ಗಳನ್ನು ಮಾಡವುದನ್ನು ಸಹ ನೋಡಬಹುದು ಎಂದು ತಿಳಿದುಬಂದಿದೆ.

ಅಮೀರ್ ತಮ್ಮ ಲುಕ್ ಅನ್ನು ಮಾತ್ರ ಬದಲಿಸುತ್ತಿರುವುದಲ್ಲ ಬದಲಾಗಿ ತಮ್ಮ ಪೂರ್ಣ ವ್ಯಕ್ತಿತ್ವವನ್ನೆ ಬದಲಿಸಲು ಹೊರಟಿರುವಂತೆ ಕಂಡುಬರುತ್ತಿದೆ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್‌, ಘಜ್ನಿ