ಚಿತ್ರರಂಗದಲ್ಲಿ 16 ವರ್ಷಗಳಿಂದ ಕಾರ್ಯ ನಿರತರಾಗಿರುವ ನಟ-ನಿರ್ಮಾಪಕ ಸುನಿಲ್ ಶೆಟ್ಟಿ ತಮ್ಮ ಸಹ ನಟ ಅಕ್ಷಯ್ ಕುಮಾರ್ ಚಿತ್ರರಂಗದಲ್ಲಿ ತಮ್ಮ ಕೆರಿಯರ್ ಅನ್ನು ಬೆಳೆಸಿಕೊಂಡ ಬಗೆಗೆ ತಮಗೆ ಅಸೂಯೆ ಉಂಟಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅಕ್ಷಯ್ ಕುಮಾರ್ ನನಗೆ ಸ್ಪೂರ್ತಿಯಾಗಿದ್ದಾರೆ. ಅವರು ತಮ್ಮ ಕೆರಿಯರ್ ಅನ್ನು ಅತ್ಯುತ್ತಮವಾಗಿ ರೂಪಿಸಿಕೊಂಡಿದ್ದಾರೆ. ನನಗೆ ಅವರ ಬಗ್ಗೆ ಅಸೂಯೆ ಉಂಟಾಗುತ್ತಿದೆ" ಎಂದು ತಮ್ಮ ಸಿದ್ಧ ಉಡುಪು ಮಳಿಗೆಯ ಉದ್ಘಾಟನೆಯ ಸಂದರ್ಭದಲ್ಲಿ ಸುನೀಲ್ ಹೇಳಿದ್ದಾರೆ.
"ಅಕ್ಷಯ್ ತಮ್ಮನ್ನು ಚಿತ್ರರಂಗದ ವಿಭಿನ್ನವಾದ ವಿಭಾಗದಲ್ಲಿ ತೊಡಗಿಸಿಕೊಂಡರು, ಅದು ಹಾಸ್ಯ ಪಾತ್ರವಾಗಿದೆ ಮತ್ತು ಇದರಿಂದಾಗಿ ಅವರು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಕ್ಷ ಯ್ರೊಂದಿಗೆ ನನ್ನ ಮಿತ್ರತ್ವ 'ಹೇರಾ ಫೇರಿ' ಚಿತ್ರಕ್ಕಿಂತಲೂ ಮೊದಲಿನಿಂದ ಬೆಳೆದು ಬಂದಿದೆ" ಎಂದು ಸುನೀಲ್ ತಿಳಿಸಿದ್ದಾರೆ.