ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಆತ್ಮಹತ್ಯೆ ಯತ್ನ ಮಾಡಿಲ್ಲ: ರಂಭಾ
ಸುದ್ದಿ/ಗಾಸಿಪ್
Feedback Print Bookmark and Share
 
PTI
ಖಾಸಗಿ ಚಿಕಿತ್ಸಾಲಯದಲ್ಲಿ ಒಂದು ದಿನದ ಚಿಕಿತ್ಸೆ ಪಡೆದಿದ್ದ ಬಹುಭಾಷಾ ನಟಿ ರಂಭಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಹಬ್ಬಿದ್ದ ವದಂತಿಗಳನ್ನು ಅವರು ಮಂಗಳವಾರದಂದು ಅಲ್ಲಗಳೆದಿದ್ದಾರೆ.

"ನನಗೆ ಆಹಾರದ ನಂಜು ( ಫುಡ್ ಪಾಯಿಸನಿಂಗ್) ಉಂಟಾಗಿದ್ದರಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲ್ಪಟ್ಟಿದ್ದೆ. ಈ ಕಾರಣದಿಂದಾಗಿ ನಾನು ಆತ್ಮಹತ್ಯೆಗೆ ಪ್ರಯತ್ನಸಿದ್ದೇನೆ ಎಂಬ ಸುಳ್ಳುಸುದ್ದಿ ಹಬ್ಬಿತು" ಎಂದು ರಂಭಾ ಹೇಳಿದರು.

"ನಾನು ನನ್ನ ಪರಿವಾರದೊಂದಿಗೆ ಬಹಳ ಹೊಂದಿಕೊಂಡಿದ್ದೇನೆ ಮತ್ತು ನಾನು ಯಾವಾಗಲೂ ನಿಶ್ಚಿಂತೆಯಾಗಿರುವ ವ್ಯಕ್ತಿ. ದೇಶಾದ್ಯಂತದಿಂದ ನನ್ನ ಸಹನಟರು, ನಿರ್ಮಾಪಕರು ಮತ್ತು ಅಭಿಮಾನಿಗಳು ಕರೆ ಮಾಡಿ, ನನಗೆ ಪ್ರಣಯ ದ್ರೋಹ ಮಾಡಿದ ವ್ಯಕ್ತಿಯ ಬಗ್ಗೆ ತಿಳಿಸುವಂತೆ ಕೇಳಿದರು" ಎಂದು ಖುಷಿಯಲ್ಲಿಯೇ ಇರುವಂತೆ ಕಂಡು ಬರುತ್ತಿದ್ದ ರಂಭಾ ಹೇಳಿದರು.

ಈ ಮೊದಲು ರಂಭಾ ಅವರು ಭೋಜ್‌ಪುರಿ ನಟ ರವಿಶಂಕರ್ ಅವರನ್ನು ಪ್ರೇಮಿಸುತ್ತಿದ್ದು ಅವರಿಬ್ಬರ ನಡುವೆ ಒಡಕುಂಟಾಗಿ ದೂರಾಗಿದ್ದರು ಮತ್ತು ಅವರಿಗೆ ಚಿತ್ರರಂಗದಲ್ಲಿಯೂ ಸಾಕಷ್ಟು ಅವಕಾಶಗಳು ಲಭಿಸುತ್ತಿಲ್ಲವಾದ್ದರಿಂದ ಮನನೊಂದು ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು ಎಂಬ ವದಂತಿಗಳು ಹಬ್ಬಿದ್ದವು.

ಜೂನ್ 5, 19976ರಲ್ಲಿ ಜನಿಸಿದ ಅಮೃತ ನಂತರ ತಮ್ಮ ಹೆಸರನ್ನು ರಂಭಾ ಎಂಬುದಾಗಿ ಬದಲಾಯಿಸಿಕೊಂಡಿದ್ದರು. ಅವರು ತಮಿಳು, ಮಳಯಾಳಂ, ತೆಲುಗು, ಕನ್ನಡ, ಹಿಂದಿ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ರಂಭಾ ಮತ್ತು ದಿವಂಗತ ನಟಿ ದಿವ್ಯಭಾರತಿ ನಡುವೆ ವಿಲಕ್ಷಣ ಸಾಮ್ಯತೆ ಇದೆ. ದಿವ್ಯಭಾರತಿ ಅವರು 80ರ ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಂಭಾ, ಆತ್ಮಹತ್ಯೆ