ತನ್ನ ಮೊದಲ ಚಿತ್ರ 'ತಾರೆ ಜಮೀನ್ ಪರ್'ನಲ್ಲಿ ತನ್ನ ಅಮೋಘ ಅಭಿನಯದಿಂದ ಚಿತ್ರಪ್ರೇಮಿಗಳನ್ನು ನಗಿಸಿದ ಮತ್ತು ಅಳಿಸಿದ ಹುಡುಗ ದರ್ಶಿಲ್ ಸಫಾರಿ ಬಹುಭಾಷಿಕ ನಿರ್ದೆಶಕ ಪ್ರಿಯದರ್ಶನ್ ಅವರು ನಿರ್ದೇಶಿಸಲಿರುವ ಇರಾನಿಯನ್ ರಿಮೇಕ್ ಚಿತ್ರದ ಮುಖ್ಯಪಾತ್ರದಲ್ಲಿ ನಟಿಸಲಿದ್ದಾನೆ.
1998ರ ಇರಾನಿಯನ್ ಚಿತ್ರ "ಚಿಲ್ಡ್ರನ್ ಅಫ್ ಹೆವನ್" ಸಹೋದರ-ಸಹೋದರಿಯರ ನಡುವಿನ ಹೃದಯವಿದ್ರಾವಕ ಸಂಬಂಧದ ಕುರಿತ ಕಥಾಹಂದರ ಹೊಂದಿದೆ. ಈ ಚಿತ್ರವನ್ನು ಪ್ರಿಯದರ್ಶನ್ ಹಿಂದಿಯಲ್ಲಿ ನಿರ್ದೇಶಿಸಲಿದ್ದಾರೆ. ಚಿತ್ರವು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದ್ದು ಅನೇಕ ವಿದೇಶಿ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗುವ ನಿರೀಕ್ಷೆಯಿದೆ.
ಚಿತ್ರದಲ್ಲಿ ದರ್ಶಿಲ್ ತಂಗಿಯ ಪಾತ್ರಕ್ಕೆ ಇನ್ನಷ್ಟೇ ನಟಿಯ ಆಯ್ಕೆ ಆಗಬೇಕಿದೆ.
ಪ್ರಿಯದರ್ಶನ್ರ ಮುಂಬರುವ ಚಿತ್ರ ಕಾಂಚಿಪುರಮ್ ಟೊರಾಂಟೊ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿದೆ.
ಪ್ರಿಯದರ್ಶನ್ ಇತ್ತೀಚೆಗೆ 'ಭೂಲ್ ಭುಲಯ್ಯ', 'ಗರಮ್ ಮಸಾಲ' ಮತ್ತು 'ಹೇರಾ ಫೇರಿ'ಯಂತಹ ಚಿತ್ರಗಳನ್ನು ನಿರ್ದೇಶಿಸಿದ್ದರು.