ಶಿಲ್ಪಾರ ರೀಲ್ ಲೈಫ್ ಕೆಳಮಟ್ಟದಲ್ಲಿದ್ದರೂ, ರಿಯಲ್ ಲೈಫ್ನಲ್ಲಿ ಶಿಲ್ಪಾ ಒಂದಿಲ್ಲದಿದ್ದರೆ ಇನ್ನೊಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಹಿಂದೊಮ್ಮೆ ಭಾರತದ ಸಾಂಪ್ರದಾಯಿಕ ಉಡುಗೆಯಾದ ಸೀರೆಗೆ ನಿಷೇಧ ಹೇರಬೇಕೆಂದು ಹೇಳಿ ಶಿಲ್ಪಾ ಸುದ್ದಿ ಮಾಡಿದ್ದರು.
ಆದರೆ ಶಿಲ್ಪಾ ಹೀಗೆ ಹೇಳಿರುವುದಕ್ಕೆ ಹಿನ್ನಲೆಯಿದೆ, 'ತಮಿಳ್ ಮಸ್ರು' ಎಂಬ ತಮಿಳು ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರದಲ್ಲಿ ಶಿಲ್ಪ ಆಶ್ಲೀಲವಾಗಿ ಫೋಸ್ ನೀಡಿದ್ದಾರೆಂದು ಚೆನ್ನೈ ನ್ಯಾಯಾಲಯ ಶಿಲ್ಪಾ ಶೆಟ್ಟಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಕಾರಣಕ್ಕಾಗಿಯೇ ಹೊಟ್ಟೆ ಕಾಣಿಸುವುದೇ ಅಶ್ಲೀಲವಾದರೆ ಭಾರತದ ಸಾಂಪ್ರದಾಯಿಕ ಉಡುಗೆ ಸೀರೆಯನ್ನು ನಿಷೇಧಿಸಬೇಕೆಂದು ಕೋಪೋದ್ರೇಕದ ಪ್ರತಿಕ್ರಿಯೆ ನೀಡಿದ್ದರು ಶಿಲ್ಪಾ.
ಈ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಮತ್ತು ಪತ್ರಿಕೆಯ ಸಂಪಾದಕರ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು.
ನಂತರ ಬಿಗ್ ಬ್ರದರ್ ಶೋ ಕಾರ್ಯಕ್ರಮದ ಸಂದರ್ಭ ವರ್ಣಭೇದ ನೀತಿಗೆ ಗುರಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಶಿಲ್ಪ ಪ್ರಸ್ತುತ ಬಿಗ್ ಬಾಸ್ 2ನ್ನು ಅಯೋಜಿಸಿದ್ದಾರೆ. ಆದರೆ ಕಳೆದ ಬಾರಿ ಶಿಲ್ಪಾರ ಬದ್ಧ ವೈರಿಯಾಗಿದ್ದ ಜೇಡ್ ಗೂಡಿ, ಈ ಬಾರಿ ಶಿಲ್ಪಾರ ಗೆಳತಿಯಾಗಿ ಮಾರ್ಪಟ್ಟಿದ್ದಾರೆ ಮತ್ತು ಅವರು ಶಿಲ್ಪಾರ ಬಿಗ್ ಬಾಸ್ 2ರಲ್ಲಿ ಭಾಗವಹಿಸಲು ಆಗಮಿಸಿದ್ದರು. ಆದರೆ ಕ್ಯಾನ್ಸರ್ನಿಂದ ಬಳಲುತ್ತಿರುವ ಗೂಡಿ ಭಾರತಕ್ಕೆ ಆಗಮಿಸಿದ್ದರೂ ಕೂಡ ಸ್ವದೇಶಕ್ಕೆ ವಾಪಸಾಗಿದ್ದರು.