ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » 'ಕೆಟ್ಟಹುಡುಗ' ಸಂಜುಬಾಬು ಮಾಡಿದ ಒಳ್ಳೆ ಕೆಲಸ!
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್‌ನ 'ಬ್ಯಾಡ್ ಬಾಯ್' ಇಮೇಜಿನ ಸಂಜಯ್ ದತ್‌ಗೆ ಸಂಬಂಧಿಸಿದ ಸುದ್ದಿ. ಇದು ಸಿನಿಮಾದ ಆಚೆಗಿನ ವಿಚಾರಕ್ಕೆ ಸಂಬಂಧಿಸಿದ್ದು. 'ಬ್ಯಾಡ್ ಬಾಯ್' ಸಂಜು 'ಗುಡ್‌ವರ್ಕ್' ಮಾಡಿ ಮಾಧ್ಯಮಗಳ ಹೆಡ್ಡಿಂಗ್ ಆಕ್ರಮಿಸಿದ್ದಾರೆ.

ಕ್ಯಾನ್ಸರ್ ಪೀಡಿತ ಎರಡರ ಹರೆಯ ಮಗುವೊಂದರ ಚಿಕಿತ್ಸೆಗಾಗಿ ಎರಡೂವರೆ ಲಕ್ಷ ರೂಪಾಯಿ ನೀಡಿ, ಸಂಜು ಬಾಬು ಔದಾರ್ಯತೆ ಮೆರೆದಿದ್ದಾರೆ.

IFM
ಅಚಲ ಸಚ್‌ದೇವ್ ಎಂಬ ನಟಿ, ರೂಪದರ್ಶಿ ಅವರ ಕುಟುಂಬ ಸ್ನೇಹಿತರ ಸಂಬಂಧಿಯೊಬ್ಬರ ಮಗು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರಿಗೆ ಹಣದ ಅವಶ್ಯಕತೆ ಎದುರಾಗಿತ್ತು. ಹಾಗಾಗಿ ಸಂಜಯ್ ದತ್ ತಾಯಿ ನರ್ಗೀಸ್ ದತ್ ಹೆಸರಿನಲ್ಲಿರುವ ಕ್ಯಾನ್ಸರ್ ಚಾರಿಟೇಬಲ್ ಸಂಸ್ಥೆಯಿಂದ ಸಹಾಯ ಒದಗಿಸುವಂತೆ ಸಂಜಯ್‌ರನ್ನು ವಿನಂತಿಸಲು ಅಚಲರನ್ನು ಕೋರಲಾಗಿತ್ತು. ತನ್ನ ಪರಿಚಿತ ಸಿಕ್ ಕುಟುಂಬದ ಎರಡರ ಹರೆಯದ ಮಗು ಸಾಯ್ಶಾ ಕ್ಯಾನ್ಸರ್‌ನಿಂದ ಬಳಲುತ್ತದೆ ಎಂಬುದನ್ನು ತಿಳಿದು ಆಘಾತಗೊಂಡ ಅಚಲ, ತಕ್ಷಣ ಸಂಜಯ್‌ಗೆ ಫೋನ್ ಮಾಡಿ ಸಹಾಯ ಯಾಚಿಸಿದ್ದರಂತೆ.

ವಿಷಯ ಕೇಳಿದ ಸಂಜಯ್, ಟ್ರಸ್ಟ್ ವಿಚಾರ ಬಿಡಿ, ತಾನು ತನ್ನ ಕಿಸೆಯಿಂದಲೇ ನೆರವು ನೀಡುವುದಾಗಿ ಹೇಳಿದರಂತೆ. ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ಎರಡುವರೆ ಲಕ್ಷ ರೂಪಾಯಿ ನೀಡುವುದಾಗಿ ಹೇಳಿದರಂತೆ.

ಸಂಜಯ್ ಔದಾರ್ಯ ಕಂಡು ಮೂಖವಾಗಿರುವ ಕ್ಯಾನ್ಸರ್ ಪೀಡಿತ ಮಗುವಿನ ಅಮ್ಮ ಹರ್‌ಜೀತ್ ಕೌರ್, ಭಾವಪರವಶರಾಗಿ ಅತ್ತುಬಿಟ್ಟರಂತೆ.

ಅಚಲ್ ದತ್‌ರೊಡನೆ ಚಾಂದ್‌ನಿ ಮತ್ತು ದಿಲ್ ಕ್ಯಾ ಕರೆಯಲ್ಲಿ ನಟಿಸಿದ್ದಾರೆ.

ಸಂಜಯ್ ದತ್ ತಾಯಿ ನರ್ಗೀಸ್ ದತ್ ಅವರೂ ಕ್ಯಾನ್ಸರ್ ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಂಜಯ್ ದತ್, ಕ್ಯಾನ್ಸರ್, ಸಹಾಯ