ಫರಾನ್ ಅಖ್ತರ್ ಅವರ ಚಿತ್ರ ರಾಕ್ ಆನ್ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆಯುತ್ತಿದೆ. ಚಿತ್ರ ಬಿಡುಗಡೆಗೆ ಮುಂಚಿತವಾಗಿ ಅಂತಹ ಸಂಚಲನೆಯನ್ನೇನೂ ಉಂಟುಮಾಡಿರದಿದ್ದರೂ, ಬಳಿಕ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗಿದೆ.
ಮೊದಲದಿನವೇ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೀಕ್ಷಕರು ಮತ್ತು ವಿಮರ್ಷಕರು ಚಿತ್ರವನ್ನು ಮೆಚ್ಚಿದ್ದಾರೆ.
ಮುಂದಿನ ನಾಲ್ಕು ವಾರಗಳ ಕಾಲ ಓಡುವುದರಲ್ಲಿ ಸಂಶಯವಿಲ್ಲ ಎಂದು ಚಿತ್ರಮಂದಿರಗಳು ಹೇಳುತ್ತಿವೆ.
ಫರಾನ್ ಅಖ್ತರ್, ಪ್ರಚಿ ದೇಸಾಯ್ ಮತ್ತು ನಿಕೊಲೆಟ್ ಬರ್ಡ್- ಈ ಮೂವರ ಚೊಚ್ಚಲ ನಟನೆಯ ಚಿತ್ರ ಇದಾಗಿದೆ. ಫರಾನ್ ಅವರು ಉದ್ದ ಕೂದಲಿನ ಸಂಗೀತಗಾರನ ಪಾತ್ರ ವಹಿಸಿದ್ದಾರೆ.