ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪ್ರಿಯಾಂಕಳಿಗೆ ಮನಸೋತ ಶಾಹಿದ್....
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್‌ನ ಚಾಕಲೇಟ್ ಬಾಯ್ ಶಾಹಿದ್ ಕಪೂರ್ ತನ್ನ ಬಹುಕಾಲದ ಪ್ರೇಯಸಿ ಕರೀನಾ ಕಪೂರ್‌ರಿಂದ ಬೇರೆಯಾದುದೇ ತಡ ಅವರ ಸುತ್ತು ಒಂದಾದ ನಂತರ ಒಂದರಂತೆ ಆನೇಕ ಪ್ರೇಮ ಪ್ರಕರಣಗಳು ಸುತ್ತುವರಿಯುತ್ತಲೇ ಇವೆ. ವಿದ್ಯಾ ಬಾಲನ್, ಟೆನಿಸ್ ತಾರೆ ಸಾನಿಯಾ ಹೀಗೆ ಪಟ್ಟಿ ಬೆಳೆದು ಬರುತ್ತದೆ. ಸದ್ಯದ ಸುದ್ದಿಯೆಂದರೆ ಪ್ರಸ್ತುತ ಸಾನಿಯಾರಿಂದ ದೂರಾಗಿರುವ ಶಾಹಿದ್ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾರಿಗೆ ಮನಸೋತಿದ್ದಾರಂತೆ.

ವರದಿಗಳ ಪ್ರಕಾರ, ವಿಶಾಲ್ ಭಾರಧ್ವಾಜ್‌ರ 'ಕಾಮಿನಿ' ಚಿತ್ರದ ಸೆಟ್‌ನಲ್ಲಿ ಶಾಹಿದ್ ಮತ್ತು ಪ್ರಿಯಾಂಕ ಬಹಳ ಸಮಯವನ್ನು ಜೊತೆಯಾಗಿ ಕಳೆಯುತ್ತಿದ್ದಾರೆ.

ತಮ್ಮ 'ಉತ್ತಮ ಗೆಳತಿ'ಯಿಂದ ದೂರ ಸರಿಯುತ್ತಿರುವ ಶಾಹಿದ್‌ಗೆ ಕರೀನಾರ ಪ್ರೇಮದಲ್ಲಿ ಮುಳುಗಿದ್ದಾಗಲೂ ಪ್ರಿಯಾಂಕರೆಂದರೆ ಇಷ್ಟವಂತೆ. ಆದರೆ ಈ ಜೋಡಿ ಹಿಂದೆ ಯಾವುದೇ ಚಿತ್ರದಲ್ಲಿ ಜೊತೆಯಾಗಿ ನಟಿಸಿರಲಿಲ್ಲ.

ಕೆಲವು ಮೂಲಗಳು ಹೇಳುವಂತೆ ಶಾಹಿದ್ ಮತ್ತು ಪ್ರಿಯಾಂಕ ಗಂಟೆಗಟ್ಟಲೆ ಪರಸ್ಪರರೊಡನೆ ಮಾತನಾಡುವುದರಲ್ಲಿ ಕಳೆಯುತ್ತಾರೆ. ಇದು ಇಡಿಯ ಚಿತ್ರ ತಂಡದಲ್ಲಿ ಗುಸುಗುಸು ಹರಡಲು ಕಾರಣವಾಗಿದೆ.

ಇಷ್ಟೂ ಸಾಲದೆಂಬಂತೆ ಈ ಇಬ್ಬರು ಜೊತೆಯಾಗಿ ಡಿನ್ನರ್‌ಗೆ ಮತ್ತು ಚಿತ್ರಮಂದಿರಗಳಿಗೆ ಹೋಗುತ್ತಿರುವುದು ಕಂಡುಬಂದಿದೆ. ಕಾಕತಾಳೀಯವಾಗಿ ಈ 'ಉತ್ತಮ ಸ್ನೇಹಿತರು' ವರ್ಸೋವದಲ್ಲಿನ ಒಂದೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ ಮತ್ತು ಚಿತ್ರೀಕರಣಕ್ಕೆ ಜೊತೆಯಾಗಿ ಪ್ರಯಾಣಿಸುತ್ತಾರೆ. ಈ ಇಬ್ಬರ ನಡುವೆ ಫಿಲ್ಮಿ ಗಾಸಿಫ್‌ಗಳಿಗಿಂತಲೂ ಹೆಚ್ಚಿನದೇನೋ ನಡೆಯುತ್ತಿರುವಂತಿದೆ. ಈ ಉತ್ತಮ ಸ್ನೇಹದ ಮುಂದಿನ ಬೆಳವಣಿಗೆಯನ್ನು ಕಾಲವಷ್ಟೆ ತಿಳಿಸಬಲ್ಲದು...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಿಯಾಂಕ ಚೋಪ್ರಾ, ಶಾಹಿದ್ ಕಪೂರ್, ಕಾಮಿನಿ