ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಚ್ಚನ್‌ರ ನಂತರ ಕಿಂಗ್ ಖಾನ್‌ರತ್ತ ತಿರುಗಿದ ಸೇನಾ ಬಾಣ
ಸುದ್ದಿ/ಗಾಸಿಪ್
Feedback Print Bookmark and Share
 
IFM
ತಮ್ಮನ್ನು ಉತ್ತರಪ್ರದೇಶದವರೆಂದು ಕರೆದುಕೊಂಡ ಜಯ ಬಚ್ಚನ್‌ರ ಮೇಲೆ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹರಿಹಾಯ್ದಿದ್ದರು, ಈಗ ಶಿವ ಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆಯವರು ದೆಹಲಿ ಮೂಲದ, ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರನ್ನು ತಮ್ಮ ಬಿರುನುಡಿಗೆ ಗುರಿಯಾಗಿಸಿದ್ದಾರೆ.

"ಶಾರುಖ್ ಖಾನ್ ತಮ್ಮನ್ನು 'ದಿಲ್ಲಿವಾಲಾ' ಎನ್ನುತ್ತಾರೆ. ನೀವು ದೆಹಲಿಯವರಾದರೆ ಏತಕ್ಕೆ ಮಹಾರಾಷ್ಟ್ರಕ್ಕೆ ಬಂದಿದ್ದೀರಿ" ಎಂದು ಸೇನಾ ಮುಖ್ಯಸ್ಥ ಬಾಳ್ ಠಾಕ್ರೆ 'ಸಾಮ್ನಾ'ದ ಸಂಪಾದಕೀಯವೊಂದರಲ್ಲಿ ಕೇಳಿದ್ದಾರೆ.

"ಸಂಪತ್ತು ಮತ್ತು ಪ್ರಸಿದ್ಧಿಯನ್ನು ಪಡೆಯಲು ನೀವು ಮಹಾರಾಷ್ಟ್ರಕ್ಕೆ ಬಂದಿದ್ದೀರಿ ಆದರೆ ಒಮ್ಮೆ ನೀವು ಅದನ್ನು ಗಳಿಸಿಕೊಂಡ ನಂತರ ನಿಮ್ಮ ಪ್ರದೇಶದ ಹೆಸರನ್ನು ಎತ್ತಿ ಹೇಳುತ್ತೀರಿ ಮತ್ತು ಮರಾಠಿ ಜನರು ತಮ್ಮದೆ ರಾಜ್ಯದಲ್ಲಿ ತುಟಿಬಿಚ್ಚುವಂತಿಲ್ಲ" ಎಂದು ಸೇನಾ ಸಂಪಾದಕೀಯದಲ್ಲಿ ಹೇಳಲಾಗಿದೆ.

"ನೀವು ಪ್ರಾದೇಶಿಕತೆಯ ಭಾವನೆಯನ್ನು ಹೊಂದಿರುವಾಗ ನಾವು ಸಹ ಅಂತಹ ಭಾವನೆಗಳಿಗೆ ಒಂದಿಷ್ಟು ಪ್ರಾಶಸ್ತ್ಯ ನೀಡಿದರೆ ತಪ್ಪೇನು" ಎಂದು ಸಾಮ್ನಾ ಹೇಳಿದೆ.

"ಅಮಿತಾಭ್ ಬಚ್ಚನ್ ಯಾವುದೇ ಪ್ರದೇಶಕ್ಕೆ ಅಥವಾ ಭಾಷೆಗೆ ಸೇರಿದವರಲ್ಲ. ಕಲೆಯ ವಿಷಯಕ್ಕೆ ಬಂದಾಗ ಪ್ರಾದೇಶಿಕತೆ ಮತ್ತು ಭಾಷೆಯ ಗೋಡೆಗಳು ಕುಸಿದು ಬೀಳುತ್ತವೆ, ಅವರು ಅಂತಹ ಶ್ರೇಷ್ಠ ನಟ" ಎಂದು 'ಸಾಮ್ನಾ' ಹೇಳಿದೆ. ಅದೇನೆ ಇದ್ದರೂ ಅವರ ಪತ್ನಿ 'ತಾವು ಉತ್ತರಪ್ರದೇಶದವರು' ಎಂದು ಹೇಳುತ್ತಿರುವಾಗ ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು 'ಸಾಮ್ನಾ' ಪ್ರಶ್ನಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಚ್ಚನ್, ಶಾರುಖ್ ಖಾನ್, ಶಿವ ಸೇನೆ, ರಾಜ್ ಠಾಕ್ರೆ, ಬಾಲ್ ಠಾಕ್ರೆ