ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸಲ್ಲುಗೆ 'ನನ್ನ ಮದುವೆಯಾಗೋ' ಎಂದ ರಾಖಿ!!!
ಸುದ್ದಿ/ಗಾಸಿಪ್
Feedback Print Bookmark and Share
 
IFM
ಸಲ್ಮಾನ್ ಖಾನ್‌ರ ರಿಯಾಲಿಟಿ ಶೋ 'ದಸ್ ಕಾ ದಮ್' ಕಾರ್ಯಕ್ರಮದ ಅದ್ಧೂರಿಯ ಫೈನಲ್ ಸಂದರ್ಭ ಐಟಂ ಬಾಂಬ್ ರಾಖಿ ಸಾವಂತ್, ಸಲ್ಮಾನ್ ಖಾನ್‌ರಿಗೆ "ನನ್ನನ್ನು ಮದುವೆಯಾಗಿ" ಎಂದು ಕೇಳಿ ದಂಗು ಬಡಿಸಿದ್ದಾರೆ.

ತನ್ನನ್ನು ಮದುವೆಯಾಗು ಎಂದು ಹೇಳಿದ ಬಳಿಕ ರಾಖಿ, ಕೈಯಲ್ಲಿ ಉಂಗುರ ಒಂದನ್ನು ಹಿಡಿದಿದ್ದರು ಎಂದು ಪತ್ರಿಕಾ ವರದಿಗಳು ಹೇಳಿವೆ.


ಸಲ್ಮಾನ್ ಮುಖ್ಯ ಅತಿಥಿಯಾಗಿದ್ದ ಕಳೆದ ವರ್ಷ ನಚ್ ಬಲಿಯೇ 3 ರಿಯಾಲಿಟಿ ಕಾರ್ಯಕ್ರಮದ ಫೈನಲ್‌ ವೇಳೆಗೆ ಸೋತ ರಾಖಿ ವೇದಿಕೆಯಿಂದ ಮುನಿಸಿಕೊಂಡು ಹೊರಹೋಗಿದ್ದರು.

ಕಾರ್ಯಕ್ರಮದಲ್ಲಿ ಸಂಜಿದಾ ಶೇಖ್ ಮತ್ತು ಅಮೀರ್ ಅಲಿ ಎದುರು ಸೋಲು ಕಂಡ ರಾಖಿ ತನ್ನ ಜೊತೆಗಾರ ಅಭಿಷೇಕ್ ಅವಾಸ್ತಿಯೊಂದಿಗೆ ಹೊರನಡೆದಿದ್ದರು. ಸಲ್ಮಾನ್ ಖಾನ್ ಅವರನ್ನು ಹಿಂಬಾಲಿಸಿ ಸಮಾಧಾನಿಸಲು ಯತ್ನಿಸಿದರೂ ಅವರನ್ನು ಧಿಕ್ಕರಿಸಿ ರಾಖಿ ತಮ್ಮ ಕಾರಿನಲ್ಲಿ ಕುಳಿತು ಬುರ್ರನೆ ತೆರಳಿದ್ದರು.

ಆನಂತರ ರಾಖಿಯ ಬಗ್ಗೆ ಸಲ್ಮಾನ್ ಕೋಪಗೊಂಡಿದ್ದರು. ಆದರೆ ಪ್ರಸ್ತುತ ರಾಖಿಯನ್ನು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ನೋಡಿದರೆ ಹಳೆಯದಲ್ಲವನ್ನು ಮರೆತು ವಿವಾದಗಳ ರಾಣಿಯನ್ನು ಸಲ್ಲು ಕ್ಷಮಿಸಿರುವಂತೆ ಕಂಡುಬರುತ್ತಿದೆ.

ಆದರೆ ಬಿಚ್ಚಮ್ಮಳ ಮದುವೆ ಅಫರ್‌ಗೆ ಸಲ್ಲು ಪ್ರತಿಕ್ರಿಯೆ ಏನು ಎಂದು ತಿಳಿದು ಬಂದಿಲ್ಲ...
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ರಾಖಿ ಸಾವಂತ್, ರಿಯಾಲಿಟಿ ಶೋ, ದಸ್ ಕಾ ದಮ್