'ಸಿಂಗ್ ಈಸ್ ಕಿಂಗ್' ಚಿತ್ರದ ಅದ್ಭುತ ಯಶಸ್ಸಿನಿಂದ ಬಾಲಿವುಡ್‌ನಲ್ಲಿ ಹೊಸದಾಗಿ ಪಟ್ಟಾಭಿಷಿಕ್ತರಾಗಿರುವ ಕಿಂಗ್ ಅಕ್ಷಯ್ ಕುಮಾರ್ ತಮ್ಮ ತೆರೆ ಮೇಲಿನ ಕ್ವೀನ್ ಕತ್ರಿನಾ ಕೈಫ್‌ರೊಂದಿಗೆ ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಕ್ಷಯ್-ಕತ್ರಿನಾರ ಜೋಡಿ ಸಾಲು ಸಾಲು ಯಶಸ್ವೀ ಚಿತ್ರಗಳನ್ನು ನೀಡಿ ಪ್ರೇಕ್ಷಕರು ಮತ್ತು ಚಿತ್ರ ನಿರ್ಮಾತೃಗಳಿಗೆ ದಂಗುಬಡಿಸಿದ್ದಾರೆ. ಚಿತ್ರ ನಿರ್ದೇಶಕ ಪ್ರಿಯದರ್ಶನ್ ಈ ಯಶಸ್ವೀ ಜೋಡಿಯನ್ನು ಹಾಸ್ಯ ಚಿತ್ರವೊಂದಕ್ಕಾಗಿ ತಮ್ಮ ಬಲೆಗೆ ಸೆಳೆದುಕೊಂಡಿದ್ದಾರೆ.
ಐದು ಹಿಟ್ ಚಿತ್ರಗಳನ್ನು ನೀಡಿರುವ ಈ ರೊಮ್ಯಾಂಟಿಕ್ ಜೋಡಿ ಸಧ್ಯದಲ್ಲಿ ಬೇರೆಯಾಗುತ್ತಿಲ್ಲ. ಮೂಲಗಳು ತಿಳಿಸುವಂತೆ ಪ್ರೇಕ್ಷರನ್ನು ಮೋಡಿ ಮಾಡಿರುವ ಈ ಜೋಡಿಯನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂಬ ಹಂಬಲದಲ್ಲಿ ಹಲವು ನಿರ್ಮಾಪಕರು ಅವರ ಮನೆ ಮುಂದೆ ಸಾಲುಗಟ್ಟಿದ್ದಾರಂತೆ.
ಹಾಗದರೆ, ಪ್ರಿಯನ್ ಚಿತ್ರದ ಹುರುಳೇನು? ಮೂಲಗಳ ಪ್ರಕಾರ, ಚಿತ್ರವನ್ನು ರತನ್ ಜೈನ್ ಅವರು ನಿರ್ಮಿಸಲಿದ್ದಾರೆ, ಚಿತ್ರಕ್ಕೆ 'ದೆ ದನಾ ದನ್' ಎಂದು ಹೆಸರಿಡಲಾಗಿದೆ. ಚಿತ್ರ ನವೆಂಬರ್‌ನಲ್ಲಿ ಸೆಟ್ಟೇರಲಿದ್ದು ಸುನೀಲ್ ಶೆಟ್ಟಿ, ಪರೇಶ್ ರಾವೆಲ್, ನೇಹಾ ದುಪಿಯಾ, ಸಮೀರಾ ರೆಡ್ಡಿ ಮುಂತಾದವರನ್ನೊಳಗೊಂಡ ಬಹುತಾರಗಣವನ್ನು ಹೊಂದಲಿದೆ.