ಬಾಲಿವುಡ್ನಲ್ಲಿ ತಮ್ಮ ಕಿಂಗ್ ಪದವಿಗೆ ಅಕ್ಷಯ್ ಕುಮಾರ್ರಿಂದ ಅಪಾಯ ತೋರಿಬರುತ್ತಿರುವುದರಿಂದ ಶಾರುಖ್ ಖಾನ್ ಈಗ ತುರ್ತಾಗಿ ಬಿಗ್ ಬಿ ಮತ್ತು ಜೂನಿಯರ್ ಬಚ್ಚನ್ರೊಂದಿಗೆ ತೆರೆಯನ್ನು ಹಂಚಿಕೊಂಡು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.
ಒಂದರ ಮೇಲೊಂದರಂತೆ ಐದು ಹಿಟ್ ಚಿತ್ರಗಳನ್ನು ನೀಡಿರುವ ಅಕ್ಷಯ್ ಕುಮಾರ್, ಬಾಲಿವುಡ್ ಬಾದಶಾರ ಕಿಂಗ್ ಪದವಿಗೆ ಕುತ್ತಾಗಿ ಪರಿಣಮಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಶಾರುಖ್ ತಮ್ಮ ಮೆಂಟರ್ ಮತ್ತು ಸ್ನೇಹಿತ ಯಶ್ ಚೋಪ್ರಾರ ಸಹಾಯ ಯಾಚಿಸಿದ್ದಾರಂತೆ.
ಮೂಲಗಳ ಪ್ರಕಾರ ಈ ಹಿಂದೆ ಶಾರುಖ್ ಮತ್ತು ಅಮಿತಾಭ್ ನಡುವೆ ಶೀತಲ ಸಮರ ನಡೆಯುತ್ತಿದ್ದು ಅವರು ಜೊತೆಯಾಗಿ ದುಡಿಯಲು ಒಲ್ಲದವರಾಗಿದ್ದರು. ಆದರೆ ಪ್ರಸ್ತುತ ಅಕ್ಷಯ್ ಕುಮಾರ್ ಶಾರುಖ್ರ ಬುಡವನ್ನೆ ಅಲುಗಿಸ ಹೊರಟಿರುವಂತೆ ಕಂಡುಬರುತ್ತಿರುವುದರಿಂದ ಒಬ್ಬ ಶತ್ರುವನ್ನು ಸದೆಬಡಿಯಲು ಶಾರುಖ್ ಇನ್ನೊರ್ವರತ್ತ ಮಿತ್ರತ್ವಕ್ಕಾಗಿ ಹಸ್ತ ಚಾಚಿದ್ದಾರೆ.
IFM
ಈಗಾಗಲೇ ಯಶ್ ಚೋಪ್ರಾರೊಂದಿಗೆ ಮಾತುಕತೆ ನಡೆಸಿರುವ ಶಾರುಖ್, ತಮ್ಮ ಕಿಂಗ್ ಪದವಿಯನ್ನು ಮರಳಿಸಬಲ್ಲಂತಹ ಸ್ಕ್ರಿಪ್ಟ್ ಬರೆಯುವಂತೆ ಕೇಳಿದ್ದಾರಂತೆ. ಶಾರುಖ್, ಯಶ್ರಲ್ಲಿ ಅಮಿತಾಬ್ರನ್ನು ಸಹ ಚಿತ್ರಕ್ಕೆ ಒಳಗೊಳ್ಳುವಂತೆ ಕೇಳಿದ್ದಾರೆ. ಆದರೆ ಅಮಿತಾಬ್ ಯಾವುದೇ ಚಿತ್ರದಲ್ಲಿ ತಮ್ಮ ಮಗನೊಂದಿಗಲ್ಲದೆ ಇತರರೊಂದಿಗೆ ಕಾಣಿಸಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲವಾದರಿಂದ ಇದು ಸಾಧ್ಯವಾಗದಿರಬಹುದು ಎಂದು ಯಶ್ಜಿ ತಿಳಿಸಿದ್ದಾರೆನ್ನಲಾಗಿದೆ. ಅದೇನೆ ಇದ್ದರೂ, ಶಾರುಖ್, ಅಭಿಷೇಕ್ ಜೊತೆಗೂ ತೆರೆಯನ್ನು ಹಂಚಿಕೊಂಡಲ್ಲಿ ಯಾವುದೇ ಸಮಸ್ಯೆಯಾಗದು ಎಂದು ಯಶ್ ತಿಳಿಸಿದ್ದಾರೆ.
ಶುಕ್ರದೆಸೆಯಲ್ಲಿರುವ ಅಕ್ಷಯ್ ಈ ಸುದ್ದಿ ಕೇಳಿ ಒಳಗೊಳಗೆ ನಗುತ್ತಿರಬಹುದು...