ತಮ್ಮ ಶತ್ರುಗಳೆನಿಸಿಕೊಂಡವರೆಲ್ಲರೊಂದಿಗೆ ಗೆಳೆತನ ಬೆಳೆಸಿಕೊಳ್ಳುತ್ತಿರುವ ಅಭಿಷೇಕ್, ವಿವೇಕ್‌ರೊಂದಿಗೆ ಮಿತ್ರತ್ವ ಬೆಲೆಸಿಕೊಂಡಿದ್ದು , ಈಗ ಸಲ್ಮಾನ್ ಎಂದೂ ಸಹ ತನ್ನ ಶತ್ರು ಆಗಿರಲೇ ಇಲ್ಲ ಎನ್ನುತ್ತಿದ್ದಾರೆ.
"ನನಗೆ ಎಂದೂ ಸಹ ಸಲ್ಮಾನ್ ಮೇಲೆ ಶತ್ರುತ್ವ ಇರಲಿಲ್ಲ. ಅವರು ನನ್ನ ಸೀನಿಯರ್ ಮತ್ತು ಗೆಳೆಯ, ನಾನೇಕೆ ಅವರೊಂದಿಗೆ ಯಾವುದೇ ರೀತಿಯ ಶತ್ರುತ್ವ ಹೊಂದಿರಬೇಕು" ಎಂದು ಜೂನಿಯರ್ ಬಚ್ಚನ್ ಹೇಳಿದ್ದಾರೆ.
ಸಲ್ಮಾನ್ ಅಭಿಷೇಕ್‌ರ ಹೊಸ ಚಿತ್ರ 'ದ್ರೋಣ'ದ ಪೈಟಿಂಗ್ ಅನ್ನು ಅವರಿಗೆ ಉಡುಗೊರೆ ನೀಡುವ ಕುರಿತು ಪ್ರಶ್ನಿಸಿದಾಗ, ಅಭಿಷೇಕ್ ತಮಗೆ ಪೈಟಿಂಗ್ ಬಗ್ಗೆ ಏನೂ ತಿಳಿದಿಲ್ಲವೆಂದು ಆಶ್ಚರ್ಯಕಾರಿ ಉತ್ತರ ನೀಡಿದರು
"ಈ ಬಗ್ಗೆ ನನಗೇನು ತಿಳಿದಿಲ್ಲ. ಸಲ್ಮಾನ್ ನನಗೇನಾದರೂ ನೀಡಿದರೆ ನಾನು ಖಂಡಿತವಾಗಿಯೂ ಅದನ್ನು ಎಲ್ಲರಿಗೂ ತೋರಿಸುತ್ತೇನೆ" ಎಂದು ಅಭಿಷೇಕ್ ಹೇಳಿದ್ದಾರೆ.
ಬಾಲಿವುಡ್ ವಲಯದಲ್ಲಿ ಕಾದಾಟದ ಜೊತೆಜೊತೆಗೆ ಗೆಳೆತನದ ಗಾಳಿಯೂ ಅಲ್ಲಲ್ಲಿ ಬೀಸುತ್ತಿದೆ ಎಂದಾಯಿತು......