ಟಿ-ಸಿರೀಸ್ನ ಮುಂದಿನ ಚಿತ್ರವನ್ನು ಭೂಷಣ್ ಕುಮಾರ್ ನಿರ್ಮಾಣದಲ್ಲಿ ರಾಧಿಕ ರಾವ್ ಮತ್ತು ವಿನಯ್ ಸ್ಪರು ನಿರ್ದೇಶಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಕಂಗನಾ ರಾಣಾವತ್ ಮತ್ತು ಮಾಧವನ್ ಮುಖ್ಯ ತಾರಾಗಣದಲ್ಲಿ ಇರಲಿದ್ದಾರೆ. ಈ ಚಿತ್ರವು ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದ್ದು ನಿರ್ಮಾಪಕರು ಈ ರೊಮ್ಯಾಂಟಿಕ್ ಚಿತ್ರಕ್ಕೆ ಸೂಕ್ತವಾದ ಟೈಟಲ್ನ ತಲಾಶ್ನಲ್ಲಿದ್ದಾರೆ.
ವಿನಯ್ ಸ್ಪರು ಮತ್ತು ರಾಧಿಕ ರಾವ್ ಈ ಹಿಂದೆ ಸಲ್ಮಾನ್ ಖಾನ್ರ ಲಕ್ಕಿ ಚಿತ್ರವನ್ನು ನಿರ್ದೇಶಿಸಿದ್ದರು. ಹೊಸ ಚಿತ್ರವನ್ನು ಚಿಕಾಗೋದಲ್ಲಿ ಚಿತ್ರೀಕರಿಸುವ ಯೋಜನೆ ಹೊಂದಿದ್ದಾರೆ.