ದೆಹಲಿಯಲ್ಲಿ ಶನಿವಾರ ಸರಣಿ ಸ್ಫೋಟ ನಡೆದ ಸಂದರ್ಭದಲ್ಲಿ ಅಲ್ಲಿದ್ದ ಬಾಲಿವುಡ್ನ ಹಾಟ್ ಕಪಲ್ ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ಗೆ ಯಾವುದೇ ತೊಂದರೆ ಉಂಟಾಗಿಲ್ಲ.
ಸೈಫ್ ಅಲಿಖಾನ್ ಇಮ್ತಿಯಾಜ್ ಅಲಿ ಅವರ ನಿರ್ದೇಶನದ ಹೆಸರಿಡದ ಚಿತ್ರವೊಂದಕ್ಕಾಗಿ ದೆಹಲಿಗೆ ತೆರಳಿದ್ದರು ಮತ್ತು ಕರೀನಾ ಸಮಾರಂಭವೊಂದರ ಅತಿಥಿಯಾಗಿ ದೆಹಲಿಗೆ ಆಗಮಿಸಿದ್ದರು.
ಈ ಜೋಡಿ ಐಟಿಸಿ ಮೌರ್ಯ ಶೇರಾಟೋನ್ನಲ್ಲಿ ಜೊತೆಯಾಗಿ ಉಳಿದುಕೊಂಡಿದ್ದು ಸ್ಫೋಟದ ಸಂದರ್ಭದಲ್ಲಿ ಡಿನ್ನರ್ ಸ್ವೀಕರಿಸುತ್ತಿದ್ದರು. ಅವರ ಕ್ಷೇಮ ಸಮಾಚಾರವನ್ನು ತಿಳಿದುಕೊಳ್ಳಲು ವರದಿಗಾರರು ಅವರನ್ನು ಸಂಪರ್ಕಿಸಿದಾಗ ಚಿಂತಾಕ್ರಾಂತ ಸೈಫ್ "ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಯಿಂದ ನಾವು ಅತ್ಯಂತ ನೊಂದಿದ್ದೇವೆ. ನಮಗೇನು ತೊಂದರೆ ಆಗಿಲ್ಲ. ನಾವು ಚೆನ್ನಾಗಿದ್ದೇವೆ" ಎಂದು ಉತ್ತರಿಸಿದರು. ಸ್ಫೋಟದ ಕಾರಣದಿಂದ ತಾವು ಹೊರಗೆ ತೆರಳಲು ಭಯಗ್ರಸ್ತರಾಗಿರುವುದಾಗಿ ಸೈಫ್ ತಿಳಿಸಿದರು.
ಕರೀನಾ ಭಾನುವಾರದಂದು ರಾಜಧಾನಿಯಿಂದ ಲಢಾಕ್ಗೆ ರಾಜ್ ಕುಮಾರ್ ಹಿರಾನಿ ಅವರ '3 ಇಡಿಯಟ್ಸ್' ಚಿತ್ರದ ಚಿತ್ರೀಕರಣಕ್ಕೆ ತೆರಳಿದರು.