ಯಶ್ ರಾಜ್ ನಿರ್ಮಾಣ ಸಂಸ್ಥೆಯ ಇತ್ತೀಚಿನ ಚಿತ್ರ 'ಬಚನಾ ಎ ಹಸೀನೋ' ಹಮ್ಬರ್ಗ್ ಚಿತ್ರೋತ್ಸವದ ಆರ್ಟ್ ಸಿನಿಮಾ ಪ್ರಶಸ್ತಿಗೆ ನಾಮಾಂಕಿತವಾಗಿದೆ. ಇದು ಆಧಿಕೃತ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು 2008ರ ಅಜೆಂಡಾದಲ್ಲಿ ಸೇರಿದೆ. ಚಿತ್ರದ ತಾರಾಗಣದಲ್ಲಿ ರಣ್ಬೀರ್ ಕಪೂರ್, ಬಿಪಾಶ ಬಸು, ದೀಪಿಕಾ ಪಡುಕೋಣೆ ಮತ್ತು ಮಿನಿಶಾ ಲಾಂಬ ಅವರುಗಳಿದ್ದಾರೆ.
ಈ ಪ್ರಶಸ್ತಿಯನ್ನು ಬರ್ಲಿನೇಲ್ ಮತ್ತು ಹಮ್ಬರ್ಗ್ ಚಿತ್ರೋತ್ಸವದಲ್ಲಿ ನೀಡಲಾಗುತ್ತದೆ. ವಿಜೇತ ಚಿತ್ರವನ್ನು ಯುರೋಪ್ನಾದ್ಯಂತ ವಿತರಿಸಲಾಗುತ್ತದೆ. ಅಂತಾರಾಷ್ಟ್ರೀಯ ನಿರ್ಣಾಯಕ ಮಂಡಳಿಯಲ್ಲಿ ನಿರ್ದೇಶಕರದ ಡೇನಿಯಲ್ ಲಾವುಡ್(ಫ್ರಾನ್ಸ್), ಡೈಟ್ಮಾರ್ ಜಿಂಗಲ್(ಆಸ್ಟ್ರೇಲಿಯಾ) ಮತ್ತು ಎರ್ಡ್ಮನ್ ಲಾಂಜ್(ಜರ್ಮನಿ) ಅವರುಗಳಿದ್ದಾರೆ.
ಅಕ್ಟೋಬರ್ 2ರಂದು ಜರ್ಮನಿಯ ಹಮ್ಬರ್ಗ್ನಲ್ಲಿ 'ಬಚನಾ ಎ ಹಸಿನೋ' ಚಿತ್ರ ಪ್ರಥಮ ಪ್ರದರ್ಶನ ಕಾಣಲಿದೆ. ಈ ಸಂದರ್ಭ ಖಂಡಿತವಾಗಿಯೂ ಸಿದ್ಧಾರ್ಥ ಆನಂದ್ರಿಗೆ ಸಂತೋಷ ಕೂಟ ಏರ್ಪಡಿಸುವ ಅವಕಾಶ ಒದಗಿಸಿದೆ.