ತನ್ನ ಬಹುಕಾಲದ ಗೆಳೆಯ ಕೆಲೈ ಡಾರ್ಜ್‌ರಿಂದ ಬೇರೆಯಾಗಿ ದುಃಖದಲ್ಲಿದ್ದ ಮಾಜಿ ಮಿಸ್ ಯೂನಿವರ್ಸ್ ಲಾರ ದತ್ತ, ಡಾರ್ಜ್‌ರ ಅಪ್ತ ಮಿತ್ರ ಡಿನೊ ಮೋರಿಯಾರ ಹೆಗಲಿನಲ್ಲಿ ತಲೆ ಇಟ್ಟು ಕಣ್ಣೀರು ಸುರಿಸಿದರು. ಇದರ ನಂತರ ಏನಾಗಿರಬಹುದು ಎಂಬುದನ್ನು ಎಲ್ಲರೂ ಊಹಿಸಬಹುದು, ಡಿನೊರ ಕನಿಕರ, ಕಾಳಜಿಗಳಿಗೆ ಮನಸೋತ ಲಾರ ಅವರೊಂದಿಗೆ ಸುತ್ತಾಡಲು ತೊಡಗಿದರು. ಇದನ್ನು ತಿಳಿದ ಡಾರ್ಜ್ ಈ ಇಬ್ಬರೊಂದಿಗಿನ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಂಡರು.
ಡಿನೊರೊಂದಿಗೆ ಶಾಶ್ವತ ಸಂಬಂಧವಿರಿಸಿಕೊಳ್ಳುವುದನ್ನು ಲಾರ ನಿರಾಕರಿಸುತ್ತಾರೆ. ಆದರೆ 10 ಕ್ಯಾರೆಟ್ ಹರಳಿನುಂಗುರದ ಉಡುಗೊರೆ ನೀಡಿದರೆ ಮದುವೆಗೆ ತನ್ನ ಅಭ್ಯಂತರವೇನಿಲ್ಲ ಎನ್ನುತ್ತಾರೆ ಈ ಬಾಲಿವುಡ್ ನಟೀಮಣಿ. "ನಾನು ಡಿನೊರೊಂದಿಗೆ ಓಡಾಡುತ್ತಿದ್ದೇನೆ ನಾನು ಅದನ್ನು ನಿರಾಕರಿಸುವುದಿಲ್ಲ. ಆದರೆ ನನ್ನ ಬೆರಳಿನಲ್ಲಿ ದೊಡ್ಡ ಹರಳಿನುಂಗುರ ಬರುವವರೆಗೆ ನಾನು ಅವಿವಾಹಿತಳು" ಎಂದು ಲಾರ ಹೇಳಿದ್ದಾರೆ.
"ನಾನು ದೀರ್ಘ ಕಾಲದ ಸಂಬಂಧವೊಂದರಿಂದ ಹೊರಬಂದಿದ್ದೇನೆ ಈಗಲೇ ಯಾವುದೇ ರೀತಿಯಾದ ಬದ್ಧತೆಗೆ ಒಳಪಡಲು ಇಷ್ಟಪಡುವುದಿಲ್ಲ. ನಾನು ಯೌವನ ಹೊಂದಿದ್ದೇನೆ ಅದ್ದರಿಂದ ಖುಷಿಪಡುತ್ತಿದ್ದೇನೆ. ನಾನು ಮತ್ತು ಡಿನೊ ಬಹಳ ಕಾಲದಿಂದ ಪರಿಚಿತರು. ಬಿಪಾಶರೂ ಸೇರಿದಂತೆ ನಮ್ಮದೊಂದು ತಂಡವಿತ್ತು, ನಾವು ಜೊತೆಯಾಗಿ ಸುತ್ತಾಡುತ್ತಿದ್ದೆವು. ಆದನೇ ಇದ್ದರೂ 10 ಕ್ಯಾರೆಟ್‌ನ ಹರಳು ನೀಡಿದರೆ ನಾನು ಈ ಬಗ್ಗೆ ಯೋಚಿಸುತ್ತೇನೆ" ಎಂದಿದ್ದಾರೆ ಲಾರ.
ಲಾರ, ಡಿನೊ ಹರಳು ಹಿಡಿದು ಬರುವರೆಂಬ ನಿರೀಕ್ಷೆಯಲ್ಲಿದ್ದಾರೆ ಆದರೆ ಈ ನಿರೀಕ್ಷೆಗೆ ಫಲ ಸಿಗುವುದೇ... ಕಾದು ನೋಡೋಣ...