ಹಿಂದೊಂದು ಸಮಯವಿತ್ತು ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕ ಚೋಪ್ರಾ ಜೊತೆಯಾಗಿ ನಟಿಸಿದ ಚಿತ್ರಗಳೆಲ್ಲವು ಯಶಸ್ಸು ಕಾಣುತ್ತಿದ್ದವು. ಅಕ್ಷಯ್ ಪ್ರಿಯಾಂಕರೊಂದಿಗೆ ಮತ್ತೆಂದು ದುಡಿಯದ ಸ್ಪಷ್ಟ ಲಕ್ಷಣಗಳು ಕಂಡುಬರುವವರೆಗೆ ಅವರಿಬ್ಬರು ಜೊತೆಯಾದ ಚಿತ್ರಗಳೆಲ್ಲವು ಯಶಸ್ವಿಯಾಗಿದ್ದವು. ಆದರೆ ಕತ್ರೀನಾ ಕೈಫ್ರನ್ನು ಸೇರಿದ ಅಕ್ಷಯ್ ಇನ್ನೂ ದೊಡ್ಡ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡತೊಡಗಿದರು, ಇದರಿಂದ ಪ್ರಿಯಾಂಕ ಮೇಲೆ ಹೊಡೆತ ಬಿದ್ದಿದ್ದು ನಿಜ ಆದರೆ ಇದರಿಂದ ಬೇಗನೆ ಚೇತರಿಸಿಕೊಂಡ ಪ್ರಿಯಾಂಕ ಶಾರುಖ್ ಖಾನ್(ಡಾನ್), ಹೃತಿಕ್ ರೋಶನ್(ಕ್ರಿಶ್) ಮತ್ತು ಸಲ್ಮಾನ್ ಖಾನ್(ಸಲಾಮ್-ಇ-ಇಶ್ಕ)ರೊಂದಿಗೆ ನಟಿಸುವ ಅವಕಾಶಗಳನ್ನು ಪಡೆದುಕೊಂಡರು.
ಆದರೆ ಪ್ರಿಯಾಂಕರಿಗೆ ಹೆಚ್ಚಿನ ಚಿತ್ರಗಳಲ್ಲಿ ಜೊತೆಯಾದವರು ಅಭಿಷೇಕ್ ಬಚ್ಚನ್. ಪ್ರಿಯಾಂಕ ಮತ್ತು ಅಭಿಷೇಕ್ ಅಭಿನಯದ 'ಬ್ಲಫ್ ಮಾಸ್ಟರ್' ಬಾಕ್ಸ್ ಅಫೀಸ್ನಲ್ಲಿ ಉತ್ತಮ ಓಟ ಕಂಡಿತ್ತು. ಪ್ರಸ್ತುತ ಅಭೀಷೇಕ್ರೊಂದಿಗಿನ ಪ್ರಿಯಾಂಕರ ಇನ್ನೂ ಎರಡು ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ದ್ರೋಣ ಮತ್ತು ದೋಸ್ತಾನ ಚಿತ್ರಗಳಲ್ಲಿ ಅಭಿಷೇಕ್-ಪ್ರಿಯಾಂಕ ಜೋಡಿ ಕಾಣಿಸಿಕೊಳ್ಳಲಿದೆ. ದ್ರೋಣ ಚಿತ್ರ ಅಕ್ಟೋಬರ್ 2ರಂದು ತೆರೆಗೆ ಬರಲಿದೆ ಮತ್ತು ದೋಸ್ತಾನ ಚಿತ್ರ ನವೆಂಬರ್ 14ರಂದು ಬಿಡುಗಡೆಯಾಗಲಿದೆ.
IFM
ದ್ರೋಣ ಮತ್ತು ದೋಸ್ತಾನಗಳು ಉತ್ತಮ ಓಟ ಕಂಡರೆ ಅಭಿಷೇಕ್-ಪ್ರಿಯಾಂಕ ಜೋಡಿಯ ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಲು ಅಡ್ಡಿಯಿಲ್ಲ.
ಪ್ರಿಯಾಂಕ-ಅಭಿಷೇಕ್ ಜೋಡಿ ಮಾಡವುದೇ ಪ್ರೇಕ್ಷಕರ ಮೇಲೆ ಮೋಡಿ...?