ಕತ್ರಿನಾ ಕೈಫ್ ಓರ್ವ 'ಹಾಟ್' ನಟಿ ಎಂದು ಅವರು ಸಾವಿರಾರು ಅಭಿಮಾನಿಗಳು ಹೇಳುತ್ತಾರೆ. ಆದರೆ ಗುಟ್ಟಿನ ವಿಷಯ ಹೇಳಬೇಕೆಂದರೆ ಹಾಟ್ ಕತ್ರಿನಾರಿಗೆ ಬೇಸಿಗೆ ಇಷ್ಟವಂತೆ. ಈ ವಿಷಯವನ್ನು ಕತ್ರಿನಾರ ಗೆಳೆಯರೊಬ್ಬರು ಬಹಿರಂಗಪಡಿಸಿದ್ದಾರೆ. ಇದರರ್ಥ ಬೇಸಿಗೆಯಲ್ಲಿ ಕತ್ರಿನಾರಿಂದ ಎಷ್ಟು ಬೇಕಾದರೂ ಶೂಟಿಂಗ್ ಮಾಡಿಸಿಕೊಳ್ಳಿ ಅವರು 'ಉಫ್' ಎಂದೂ ಹೇಳುವುದಿಲ್ಲವಂತೆ.
ಕತ್ರಿನಾರ ಗೆಳೆಯ ಇದಕ್ಕೊಂದು ಉದಾಹರಣೆಯನ್ನು ಕೊಡುತ್ತಾರೆ, 'ಸಿಂಗ್ ಈಸ್ ಕಿಂಗ್' ಚಿತ್ರದ ಹಾಡೊಂದರ ಚಿತ್ರೀಕರಣವನ್ನು ಈಜಿಪ್ಟನಲ್ಲಿ ನಡೆಸಲಾಗಿತ್ತು. ಆ ಸಂದರ್ಭ ಅಲ್ಲಿ ಬಹಳ ಸೆಕೆ ಇತ್ತು. ಇಡೀ ಚಿತ್ರತಂಡ ಸೆಕೆಯ ಬೇಗೆಯಿಂದ ಸುಸ್ತಾಗಿತ್ತು ಆದರೆ ಕತ್ರಿನಾ ಈ ಬಗ್ಗೆ ತುಟಿಪಿಟಿಕ್ ಅನ್ನಲಿಲ್ಲ. ಅವರು ಕೂಲ್ ಆಗಿ ಕಾಣಿಸುತ್ತಿದ್ದರು. ಬೆಚ್ಚಗಿನ ವಾತಾವರಣ ಅವರ ಹಾಟ್ನೆಸ್ ಅನ್ನು ಹೆಚ್ಚಿಸಿದಂತೆ ಕಾಣಿಸುತ್ತಿತ್ತು. ಪೂರ್ಣ ಚಿತ್ರತಂಡ ಆಶ್ಚರ್ಯಚಕಿತವಾಗಿತ್ತಂತೆ.
ಹಾಟ್ ಕತ್ರಿನಾರನ್ನು ಚಳಿಗಾಲ ತಂಪಾಗಿಸಿಬಿಡುತ್ತದೆ. 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' ಚಿತ್ರದ ಚಿತ್ರೀಕರಣ ಊಟಿಯಲ್ಲಿ ನಡೆಯುತ್ತಿತ್ತು. ಚಳಿಯ ವಾತವರಣವನ್ನು ನೋಡಿ ಕತ್ರಿನಾ ಸ್ಟೆಟರ್ ಮತ್ತು ಕಂಬಳಿ ಹೊದ್ದುಕೊಂಡು ಬಿಟ್ಟರು. ಕತ್ರಿನಾರ ಈ ವರ್ತನೆಯಿಂದ ನಾಯಕ ರಣ್ಬೀರ್ ಕಪೂರ್ ಸಹಿತ ಪೂರ್ಣ ಚಿತ್ರ ತಂಡ ಚಿಂತೆಗೀಡಾಗಿತ್ತು. ರಣ್ಬೀರ್ರಂತೂ ಕತ್ರಿನಾರಿಗೆ ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ ಶಾಲ್ ಅಥವಾ ಸ್ವೆಟರ್ ಎಂದು ಕತ್ರಿನಾರನ್ನು ಛೇಢಿಸಿದರು.