ಕರೀನಾ ಕಪೂರ್ ನಿಜಕ್ಕೂ ರಾಕ್ ಸ್ಟಾರ್, ಯಾರೊಬ್ಬರೂ ಇದನ್ನು ಅಲ್ಲಗೆಳೆಯುವಂತಿಲ್ಲ. ಸ್ಮಾರ್ಟ್, ಸೆಕ್ಸಿ, ಪರಿಶ್ರಮಿ ಮತ್ತು ಲವಲವಿಕೆಯಿಂದ ಕೂಡಿದ ಕರಿನಾ ಬೇಹೋ ತಮ್ಮ 27ನೇ ಹುಟ್ಟುಹಬ್ಬವನ್ನು ಸೆಪ್ಟಂಬರ್ 21ರಂದು ಆಚರಿಸಿಕೊಳ್ಳಲಿದ್ದಾರೆ.
ಪರಿವಾರದೊಂದಿಗಿರಲು ಬಯಸುವ ಕರೀನಾ ಈ ಬಾರಿ ಲಢಾಕ್‌ನಲ್ಲಿ ರಾಜು ಹಿರಾನಿಯವರ '3 ಇಡಿಯಟ್ಸ್' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವುದರಿಂದ ಪರಿವಾರದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇದಕ್ಕೂ ಮುಖ್ಯವಾಗಿ ಸೈಫ್ ಅಲಿಖಾನ್ ಕೂಡ ಬೆಬೋ ಹುಟ್ಟುಹಬ್ಬದಂದು ಅವರೊಂದಿಗಿರುವುದು ಸಾಧ್ಯವಾಗುವುದಿಲ್ಲ. ಆದರೆ ಸೈಫ್ ಪ್ರೇಮ ತೀವ್ರತೆ ಎಲ್ಲರಿಗೂ ತಿಳಿದಿರುವುದರಿಂದ ಅವರು ಕರೀನಾರನ್ನು ಖುಷಿ ಪಡಿಸಲು ಆದಾವ ಯೋಜನೆ ರೂಪಿಸಿದ್ದಾರೆ ಎಂಬುದನ್ನು ನೀವು ಊಹಿಸಲು ಸಾಧ್ಯವಿಲ್ಲ.
ಅದೇನೇ ಇರಲಿ ಬಾಲಿವುಡ್ ಬೆಡಗಿ ಕರಿನಾ ಬೇಬಿಗೆ ಹುಟ್ಟುಹಬ್ಬದ ಶುಭಾಶಯ ಕೋರೋಣವೇ...