ಎರಡು ಫ್ಲಾಫ್ ಚಿತ್ರಗಳ ಹೊಡೆತ ಸಾಲದೆಂಬಂತೆ, ಮಲ್ಲಿಕಾ ಶೆರಾವತ್ ಮೇಲೆ ಇನ್ನೊಂದು ಅಘಾತ ಎರಗಿದೆ.
ಸೆಶನ್ ನ್ಯಾಯಾಲಯವೊಂದು ಮಲ್ಲಿಕಾ ಮತ್ತು ಫೈವ್ ಸ್ಟಾರ್ ಹೋಟೆಲ್‌ನ ಮಾಲೀಕರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಸಮಾಜ ಸೇವಕ ವಿನೋದ್ ಜೈನ್ ಎಂಬವರು ಮಿಸ್.ಶೆರಾವತ್ ಮತ್ತು ಜೆಡಬ್ಲ್ಯೂ ಮರಿಯಟ್ ಹೋಟೆಲ್ ಮೇಲೆ ಅಶ್ಲೀಲತೆಯ ಪ್ರಕರಣವನ್ನು ದಾಖಲಿಸಿದ್ದಾರೆ. ಡಿಸೆಂಬರ್ 31, 2006ರಲ್ಲಿ ಬಾಲಿವುಡ್ ಸೆಕ್ಸ್ ಬಾಂಬ್ ಅತಿಯಾಗಿ ಅಂಗಪ್ರದರ್ಶನ ಮಾಡುವಂತಹ ಉಡುಗೆ ತೊಟ್ಟು ಹೋಟೆಲಿನಲ್ಲಿ ಕಾರ್ಯಕ್ರಮ ನೀಡಿದ್ದರು ಎಂದು ಅವರು ಅರೋಪಿಸಿದ್ದಾರೆ.
ನ್ಯಾಯಾಲಯವು ಇಬ್ಬರು ಅರೋಪಿಗಳನ್ನೂ ಅಕ್ಟೋಬರ್ 7ರ ಒಳಗೆ ಸ್ಪಷ್ಟೀಕರಣ ನೀಡುವಂತೆ ಕೇಳಿದೆ.