ಒಳ್ಳೆಯ ಹೃದಯ ಹೊಂದಿರುವ ಬಾಲಿವುಡ್ ಬ್ಯಾಡ್ಬಾಯ್ ಸಲ್ಮಾನ್ ಖಾನ್ರಿಗೆ ಈ ವರ್ಷ ದುರದೃಷ್ಟಕರವಾಗಿ ಪರಿಣಮಿಸುತ್ತಿದೆ. ಗರ್ಲ್ ಫ್ರೆಂಡ್ ಕತ್ರಿನಾ ಕೈಫ್ರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಶಾರುಖ್ ಖಾನ್ ಮತ್ತು ಸಲ್ಲು ನಡುವೆ ನಡೆದ ಕದನದ ನಂತರ ಬಾಲಿವುಡ್ ಎರಡು ಬಣಗಳಾಗಿ ವಿಭಜಿತವಾಗಿತ್ತು. ತನ್ನ ಹಲವು ಆತ್ಮೀಯರನ್ನು ಸಲ್ಮಾನ್ ವಿರೋಧಿ ಶಾರುಖ್ರಿಂದ ಕಳೆದುಕೊಂಡರು.
ಇದರ ಹೊರತಾಗಿ, ಕಿಂಗ್ ಖಾನ್ರ ಟೆಂಪ್ಟೇಶನ್ ಕಾರ್ಯಕ್ರಮದಲ್ಲಿ ಭಾಗಿಯಾದ ಕತ್ರಿನಾ ಪ್ರಸ್ತುತ ಖಾನ್ ದ್ವಯರ ಕದನವನ್ನು ಬದಿಗಿಟ್ಟು ಶಾರುಖ್ರೊಂದಿಗೆ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಬಿಗ್ ಬಿ ಮತ್ತು ಜೂನಿಯರ್ ಬಿ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ನಿರ್ದೇಶಿಸಲಿರುವ ಬಾಲಿವುಡ್ ದಂತಕತೆ ಎನಿಸಿರುವ ಯಶ್ ರಾಜ್ ಚೋಪ್ರಾರೇ ಕತ್ರಿನಾಳ ಬಳಿ ಬಂದಿದ್ದೂ ಸಹ ಕತ್ರಿನಾ ತನ್ನ ಸ್ವಾತಂತ್ರ್ಯವನ್ನು ಪ್ರಯೋಗಿಸಲು ಒಂದು ಕಾರಣವಾಗಿರಬಹುದು.
ಇನ್ನೂ ಮುಂದುವರಿದು, ಶಾರುಖ್ರ 'ಟೆಂಪ್ಟೇಶನ್ ರಿಲೋಡೆಡ್' ಕಾರ್ಯಕ್ರಮವು ಅಕ್ಟೋಬರ್ನಲ್ಲಿ ದುಬೈಯಲ್ಲಿ ನಡೆಯಲಿದೆ ಮತ್ತು ಕತ್ರಿನಾ ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಪ್ರಿಯಕರ ಸಲ್ಮಾನ್ ದೂರದ ಲಂಡನ್ನಲ್ಲಿರುವಾಗ ಕತ್ರಿನಾ ದುಬೈನಲ್ಲಿ ಟೆಂಪ್ಟೇಶನ್ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ.
ಸಲ್ಮಾನ್ರ ಇನ್ನೊರ್ವ ವಿರೋಧಿ ಜಾನ್ ಅಬ್ರಹಾಂರ ಜೊತೆಗೂ ಸಹ ಕತ್ರಿನಾ ಈಗಾಗಲೇ ಯಶ್ ರಾಜ್ ನಿರ್ಮಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಹೃದಯದರಸಿ ತಮ್ಮ ರೆಕ್ಕೆ ಬಿಚ್ಚಿ ಹಾರಲು ಸಿದ್ಧವಾಗಿರುವಂತೆ ಕಾಣಿಸುತ್ತಿದೆ. ಸಲ್ಮಾನ್ ತಮ್ಮ ಮುಂಗೋಪಿ ಬ್ಯಾಡ್ಬಾಯ್ ಸ್ವರೂಪವನ್ನು ಕತ್ರಿನಾಳಿಗೆ ಕಾಣಿಸುತ್ತಾರೆಯೇ ಅಥವಾ ಒಳ್ಳೆಯ ಹುಡುಗನಂತೆ ಸಂಗಾತಿಯ ಯಶಸ್ಸಿಗೆ ಅಭಿನಂದಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಷ್ಟೇ. ಎರಡೂ ವಿಧಗಳಲ್ಲೂ ನಷ್ಟ ಅವರದೇ.